Lakshmi Baramma 2:  8 ವರ್ಷದ ಮಗನಿದ್ದರೂ ನಟಿಯ ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ;  ʻಲಕ್ಷ್ಮಿ ಬಾರಮ್ಮʼ ಖ್ಯಾತಿಯ ವಿಲನ್‌ ಸುಪ್ರಿತಾ ಬಗೆಗಿನ ಆಸಕ್ತಿಕರ ಸಂಗತಿಗಳು

ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಭಾಗ್ಯಲಕ್ಷ್ಮಿ ಸೀರಿಯಲ್ ಪ್ರಸಾರವಾಗುತ್ತದೆ.  ಅದನ್ನೇ 2 ಭಾಗ ಮಾಡಿದ್ದಾರೆ. ಅಕ್ಕನ ಕತೆ ಸಂಜೆ 7ಕ್ಕೆ ಪ್ರಸಾರವಾದರೆ. ತಂಗಿ ಕತೆ ಲಕ್ಷ್ಮಿ ಬಾರಮ್ಮ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಮಾಡುತ್ತಿರುವ ಸುಪ್ರಿತಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. 

ಧಾರಾವಾಹಿಯಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಮೋಡಿ ಮಾಡುತ್ತಿದ್ದಾರೆ. 

ಸುಪ್ರಿತಾ ಪಾತ್ರ ಮಾಡುತ್ತಿರುವ ಇವರ ನಿಜವಾದ ಹೆಸರು ರಜನಿ ಪ್ರವೀಣ್. 

ರಜನಿ ಅವರು ರಂಗನಾಯಕಿ ಧಾರಾವಾಹಿಯಲ್ಲಿಯೂ ಸಹ ನಾಯಕಿಯಾಗಿ ನಟಿಸಿದ್ದರು

ರಜನಿಯವರು ಹರ ಹರ ಮಹಾದೇವ್, ಮಹಾದೇವಿ, ರಾಜಿ, ಅಮ್ಮನ್ ಸೇರಿದಂತೆ ಒಟ್ಟು 7 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ನೆಗೆಟಿವ್ ಪಾತ್ರವನ್ನೇ ನಿಭಾಯಿಸಿದ್ದಾರೆ.

8 ವರ್ಷದ ಮಗನಿದ್ದರೂ ಫಿಟ್ ಆಗಿದ್ದಾರೆ. ಇವರ ಫಿಟ್‍ನೆಸ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

 ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಸುಪ್ರಿತಾ, ಹೀರೊ ವೈಷ್ಣವ್ ಅತ್ತೆ. ಗಂಡನನ್ನು ಬಿಟ್ಟು ಬಂದು ತವರು ಮನೆ ಸೇರಿದ್ದಾಳೆ. ಅತ್ತಿಗೆಯನ್ನು ಕಂಡರೆ ಆಗಲ್ಲ.  ಸೊಸೆಗೂ ತನ್ನ ಅತ್ತಿಗೆಗೂ ಜಗಳ ತಂದಿಡಬೇಕು ಎಂಬುದೇ ಇವರ ಪ್ಲ್ಯಾನ್‌