Safest Cars In india : ಪ್ರಯಾಣಿಕರಿಗೆ ಅತಿ ಹೆಚ್ಚು ಸುರಕ್ಷತೆ ಕೊಡುವ ಭಾರತೀಯ ಕಾರುಗಳ ಪಟ್ಟಿ ಇಲ್ಲಿದೆ

ಕುಶಾಕ್,  ಟೈಗುನ್: ಸ್ಕೋಡಾ ಕಂಪನಿಯ ಕುಶಾಕ್  ಎಸ್ ಯುವಿ ಹಾಗೂ ಫೋಕ್ಸ್ ವ್ಯಾಗನ್ ತಯಾರಿಸಿರುವ ಟೈಗುನ್ ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿರುವ ಕಾರುಗಳಾಗಿವೆ.

ವರ್ಟಸ್ , ಸ್ಲಾವಿಯಾ: ಫೋಕ್ಸ್ ವ್ಯಾಗನ್ ಹಾಗೂ ಸ್ಕೋಡಾ ಕಂಪನಿಯ ಸೆಡಾನ್ ಕಾರುಗಳಾದ ವರ್ಟಸ್ ಹಾಗೂ ಸ್ಲಾವಿಯಾ ಕಾರಿನಲ್ಲಿ ಪ್ರಯಾಣಿಸುವ ಎಲ್ಲರಿಗೂ ಗರಿಷ್ಠ ಸುರಕ್ಷತೆ ಕೊಡುವ 5 ಸ್ಟಾರ್ ರೇಟಿಂಗ್ ಹೊಂದಿದೆ.

ಸ್ಕಾರ್ಪಿಯೊ ಎನ್​: :  ಮಹೀಂದ್ರಾ ಕಂಪನಿಯ ಸ್ಕಾರ್ಪಿಯೊ ಎನ್​ ಎಸ್​ಯುವಿ ಕಾರಿನಲ್ಲಿರುವ ಹಿರಿಯರಿಗೆ 5 ಸ್ಟಾರ್​ ಸುರಕ್ಷತೆ ಕೊಟ್ಟರೆ ಮಕ್ಕಳಿಗೆ 3 ಸ್ಟಾರ್​ ಸುರಕ್ಷತೆ ಕೊಡುತ್ತದೆ.

ಎಕ್ಸ್​ಯುವಿ 700 :   ಮಹೀಂದ್ರಾ ಕಂಪನಿಯ ಇನ್ನೊಂದು 7 ಸೀಟರ್​ ಎಸ್​ಯುವಿ ಇದು. ಇದು ಹಿರಿಯರಿಗೆ 5 ಸ್ಟಾರ್​ ಹಾಗೂ ಮಕ್ಕಳಿಗೆ 4 ಸ್ಟಾರ್ ಸುರಕ್ಷತೆ ಕೊಡುತ್ತದೆ.

ಮಟಾಟಾ ಪಂಚ್ :  ಟಾಟಾ ಮೋಟಾರ್ಸ್ ನ ಪಂಚ್ ಹಿರಿಯರಿಗೆ 5 ಸ್ಟಾರ್ ಸುರಕ್ಷತೆ ಕೊಟ್ಟರೆ ಮಕ್ಕಳಿಗೆ 4 ಸ್ಟಾರ್ ರೇಟಿಂಗ್ ಪಡೆದಿದೆ.

ಎಕ್ಸ್​ಯುವಿ 300:   ಮಹೀಂಂದ್ರಾ ಕಂಪನಿಯ ಮೂರನೇ ಸುರಕ್ಷಿತ ಕಾರು ಇದು. ಹಿರಿಯರಿಗೆ 5 ಸ್ಟಾರ್ ಸುರಕ್ಷತೆಯನ್ನು ನೀಡಿದರೆ ಮಕ್ಕಳಿಗೆ 4 ಸ್ಟಾರ್ ಸುರಕ್ಷತೆಯನ್ನು ಕೊಡುತ್ತದೆ.

ಟಾಟಾ ಆಲ್ಟ್ರೋಜ್:  ಟಾಟಾ ಕಂಪನಿಯ ಲಕ್ಸುರಿ ಹ್ಯಾಚ್ ಬ್ಯಾಚ್ ಆಲ್ಟ್ರೋಜ್ ಹಿರಿಯರಿಗೆ 5 ಸ್ಟಾರ್ ಸೇಫ್ಟಿ ನೀಡಿದರೆ, ಮಕ್ಕಳಿಗೆ 3 ಸ್ಟಾರ್ ಸೇಫ್ಟಿ ಕೊಡುತ್ತದೆ.

a

ಟಾಟಾ ನೆಕ್ಸಾನ್​:  ಟಾಟಾ ಮೋಟಾರ್ಸ್​ನ ಯಶಸ್ವಿ ಎಸ್​ಯುವಿ ನೆಕ್ಸಾನ್​ ಚಾಲಕ ಸೇರಿದಂತೆ ಹಿರಿಯ ಪ್ರಯಾಣಿಕರಿಗೆ 5 ಸ್ಟಾರ್ ಸೇಫ್ಟಿ ಕೊಟ್ಟರೆ ಮಕ್ಕಳಿಗೆ 3 ಸ್ಟಾರ್​ ಸೇಫ್ಟಿ ನೀಡುತ್ತದೆ.