Edited By: Pragati Bhandari

 ಈ ವಾರ ಅಗ್ರೆಸಿವ್‌ ಆಗಿ ವರ್ತಿಸಿದ್ದರೆಂದರೆ ಅವರು ಮೈಕಲ್‌ ಮಾತ್ರ.

ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. 

 ಮೈಕಲ್‌ ಅವರ ಕನ್ನಡಕ್ಕೆ ಕನ್ನಡಿಗರು ಕೂಡ ಮನಸೋತಿದ್ದರು. ಸ್ಕೂಲ್‌ ಟಾಸ್ಕ್‌ನಲ್ಲಿಯೂ ಕೂಡ ಕನ್ನಡ ಟೀಚರ್‌ ಆದ ಮೈಕಲ್‌ಗೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. 

ಮೈಕಲ್‌ ಆಡುವಾಗ ಸರಿಯಾಗಿ ಸ್ಪಂದಿಸದೆ ಅಸಹಕಾರ ತೋರಿದರು. ಅವರ ಉತ್ತರಗಳು ತುಸು ಅಹಂಕಾರದಿಂದಲೂ ಕೂಡಿದ್ದವು. 

ತೀರ ಸಣ್ಣ ವಿಷಯಕ್ಕೆ ಕಾರ್ತಿಕ್ ಜತೆ ಉದ್ದೇಶಪೂರ್ವಕವಾಗಿ ಜಗಳವಾಡಿದರು ಮೈಕಲ್‌.

ಕ್ಷಮೆ ಕೇಳುವ ಅವಕಾಶವನ್ನು ಎಲ್ಲ ಸ್ಪರ್ಧಿಗಳಿಗೂ ಬಿಗ್​ಬಾಸ್ ನೀಡಿದಾಗ ಮಾತನಾಡಿದ ಮೈಕಲ್, ಅಲ್ಲಿಯೂ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಬಗ್ಗೆ ಕಠಿಣ ಪದಗಳನ್ನು ಬಳಸಿ ಮಾತನಾಡಿದರು.

ಇದೀಗ ವೀಕ್ಷಕರು ಕಮೆಂಟ್‌ನಲ್ಲಿ ಈ ವಾರ ಮೈಕಲ್‌ ಮನೆಯಿಂದ ಹೊರಹೋಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ.