ಮಳೆಗಾಲದಲ್ಲಿ ಭಾರತ ರಸ್ತೆಗಳಲ್ಲಿ ಸಿಕ್ಕಾಪಟ್ಟೆ ನೀರು ತುಂಬಿಕೊಂಡಿರುತ್ತವೆ. ಇಲ್ಲೆಲ್ಲ ಡ್ರೈವ್
ಮಾಡುವುದು ಅಪಾಯಕಾರಿ. ಹೀಗಾಗಿ ಹೆಚ್ಚು ಗ್ರೌಂಡ್
ಕ್ಲಿಯರೆನ್ಸ್ ಇರುವ ಕಾರುಗಳು ಇಂಥ ರಸ್ತೆಗಳಿಗೆ ಹೆಚ್ಚು ಸೂಕ್ತವಾಗಿರುತ್ತದೆ.
ರಸ್ತೆಯಿಂದ ಹೆಚ್ಚು ಎತ್ತರಕ್ಕೆ ನಿಲ್ಲುವ ಕಾರುಗಳು ನೀರು ತುಂಬಿದ ರಸ್ತೆಯ ಮೇಲಿನ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ. ಮಳೆಗಾಲದ ಪ್ರಯಾಣದ ಬಗ್ಗೆ ಕಾಳಜಿ ಹೊಂದಿರುವವರು ಇಂಥ ಕಾರುಗಳನ್ನು ಆಯ್ಕೆ ಮಾಡಬೇಕು.
) ಮಹೀಂದ್ರಾ ಥಾರ್ ಈ ನಿಟ್ಟಿನಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಇದರು 226 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಕಾರಿನ ಆರಂಭಿಕ ಬೆಲೆ 10.5 ಲಕ್ಷ ರೂಪಾಯಿ.
ಟಾಟಾ ನೆಕ್ಸಾನ್ ಭಾರತೀಯ ಅಚ್ಚುಮೆಚ್ಚಿನ ಕಾರು. ಇದು ಕೂಡ ಅನುಕೂಲಕರ 209 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರ ಆರಂಭಿಕ ಬೆಲೆ 7.8 ಲಕ್ಷ ರೂಪಾಯಿ.
ಕಿಯಾ ಸೋನೆಟ್ 205 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದನ್ನು ಕಷ್ಟಕರ ರಸ್ತೆಯಲ್ಲಿ ಸುಲಭವಾಗಿ ಚಾಲನೆ ಮಾಡಬಹುದು. ಇದರ ಆರಂಭಿಕ ಬೆಲೆ 7.79 ಲಕ್ಷ ರೂಪಾಯಿ.
ರಿನೋ ಕೈಗರ್ ಕೇವಲ 6.5 ಲಕ್ಷ ರೂಪಾಯಿ ಆರಂಭಿಕ ಬೆಲೆ ಹೊಂದಿರುವ ಎಸ್ಯುವಿ. ಇದರಲ್ಲೂ 205 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಇದೆ.
ಮಾರುತಿ ಬ್ರೆಜಾ ಭಾರತೀಯರ ನೆಚ್ಚಿನ ಎಸ್ಯುವಿ ಎನಿಸಿಕೊಂಡಿದೆ. ಇದು 198 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರ ಆರಂಭಿಕ ಬೆಲೆ 8.29 ಲಕ್ಷ ರೂಪಾಯಿ.
ಮಾರುತಿ ಬ್ರೆಜಾ ಭಾರತೀಯರ ನೆಚ್ಚಿನ ಎಸ್ಯುವಿ ಎನಿಸಿಕೊಂಡಿದೆ. ಇದು 198 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರ ಆರಂಭಿಕ ಬೆಲೆ 8.29 ಲಕ್ಷ ರೂಪಾಯಿ.