Edited By: Pragati Bhandari

ದೇಹಕ್ಕೆ ನೀರು ಕಡಿಮೆಯಾದರೆ ಕಾಲಿನ ಸ್ನಾಯುಗಳಲ್ಲಿ ಸೆಳೆತ ಕಾಣುವುದು ಸಾಮಾನ್ಯ

ದೇಹದಲ್ಲಿ ಖನಿಜಗಳ ಅಸಮತೋಲನವಿದ್ದರೆ ಸ್ನಾಯುಗಳಲ್ಲಿ ಸೆಳೆತ ಕಾಣಬಹುದು

 ಸ್ನಾಯುಗಳಿಗೆ ಸಾಮರ್ಥ್ಯ ಮೀರಿದ ಕೆಲಸ ಕೊಡುವುದರಿಂದಲೂ ಹೀಗಾಗಬಹುದು 

ಕ್ರೀಡಾಪಟುಗಳಿಗೆ ಚಟುವಟಿಕೆಯಿಂದ ಅತಿ ಆಯಾಸವಾದರೂ ಈ ಲಕ್ಷಣಗಳು ಗೋಚರಿಸಬಹುದು

ಕೆಲವು ಔಷಧಗಳಿಗೆ ದೇಹ ಇಂಥ ಸ್ವರೂಪದಲ್ಲಿ ಸ್ಪಂದಿಸಬಹುದು

ಸಿಕ್ಕಾಪಟ್ಟೆ ಹೀಲ್ಸ್‌ ಇರುವ ಪಾದರಕ್ಷೆಗಳು ಅಥವಾ ಅಳತೆಗೆ ಒಗ್ಗದ ಚಪ್ಪಲಿಗಳಿಂದಲೂ ಹೀಗಾಗಲು ಸಾಧ್ಯ

ಚಳಿಗಾಲದಲ್ಲಿ ಇದು ಹೆಚ್ಚು ಕಾಣುವುದರಿಂದ, ಕಾಲುಗಳನ್ನು ಬೆಚ್ಚಗಿರಿಸಿಕೊಳ್ಳುವುದು ಸೂಕ್ತ

ಗರ್ಭಿಣಿಯರಿಗೆ ಕಡೆಯ ಮೂರು ತಿಂಗಳಲ್ಲಿ ಸ್ನಾಯು ಸೆಳೆತ ಸಾಮಾನ್ಯ