Edited By: Pragati Bhandari

ಒತ್ತಡ ನಿವಾರಣೆಗೆ, ಲವಲವಿಕೆ ಹೆಚ್ಚಿಸುವುದಕ್ಕೆ ಆಹಾರಗಳೂ ಕಾರಣವಾಗುತ್ತವೆ. 

ಕುಂಬಳಕಾಯಿ ಬೀಜ  ನರ ಮಂಡಲದ ಮೇಲಿನ ಒತ್ತಡ ಕಡಿಮೆ ಮಾಡುವ ನೈಸರ್ಗಿಕ ಶಾಮಕವಿದು.

ಗ್ರೀನ್‌ ಟೀ ಒತ್ತಡ ಕಡಿಮೆ ಮಾಡುವಂಥ ಅಮೈನೊ ಆಮ್ಲಗಳು ಇದರಲ್ಲಿದ್ದು, ಬಿಸಿಯಾಗಿ ಹೀರುವುದು ಚೇತೋಹಾರಿ ಎನಿಸುತ್ತದೆ.

ಇಡಿ ಗೋಧಿಯ ಬ್ರೆಡ್  ಇದರಲ್ಲಿರುವ ಸಂಕೀರ್ಣ ಪಿಷ್ಟಗಳಿಗೆ ಸೆರೊಟೋನಿನ್‌ ಎಂಬ ʻಹ್ಯಾಪಿ ಹಾರ್ಮೋನ್‌ʼ ಹೆಚ್ಚಿಸುವ ಗುಣವಿದೆ.

ಕಪ್ಪು ಚಾಕೊಲೇಟ್:  ಇದರಲ್ಲಿ ಡೋಪಮಿನ್‌, ಸೆರೊಟೊನಿನ್‌ ಹೆಚ್ಚಿಸುವ ಅಂಶವಿದ್ದು, ಮೂಡ್ ಒಳ್ಳೆಯದಾಗಿಸುತ್ತದೆ

ಮೊಸರು ಪ್ರೊಬಯಾಟಿಕ್‌ ಅಂಶವಿರುವ ಇದರಲ್ಲಿ ಸೆರೊಟೋನಿನ್‌ ಉತ್ಪತ್ತಿ ಮಾಡುವ ಸಾಧ್ಯತೆಯಿದೆ.

ಬೆರ್ರಿಗಳು ಇದರಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳಿಗೆ ಒತ್ತಡ ಶಮನ ಮಾಡುವ ಕ್ಷಮತೆಯೂ ಇದೆ.

ಕಿತ್ತಳೆ ಹಣ್ಣು ಇದರ ಘಾಟು ಪರಿಮಳವು ಸೆರೊಟೋನಿನ್‌ ಮಟ್ಟವನ್ನು ಹೆಚ್ಚಿಸುತ್ತದೆ.