Edited By: Pragati Bhandari

 ಚೆನ್ನಾಗಿ ನೀರು ಕುಡಿಯಿರಿ. ದೇಹದಲ್ಲಿ ಬೇಡದ ಅಂಶಗಳನ್ನೆಲ್ಲಾ ಹೊರ ಹಾಕುವುದು ಅಗತ್ಯ

ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಹಣ್ಣುಗಳು ಮತ್ತು ಹಸಿರು ತರಕಾರಿಗಳು ಮೊಡವೆಗಳ ಊತ ಕಡಿಮೆ ಮಾಡಲು ನೆರವಾಗುತ್ತವೆ

ವಾಲ್‌ನಟ್‌, ಅಗಸೆಬೀಜ, ಬೆಣ್ಣೆಹಣ್ಣು, ಕೊಬ್ಬಿನ ಮೀನುಗಳಲ್ಲಿರುವ ಒಮೆಗಾ ೩ ಕೊಬ್ಬಿನಾಮ್ಲವು ತ್ವಚೆಯ ಆರೋಗ್ಯ ಸುಧಾರಿಸುತ್ತದೆ

 ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳಿಂದ ದೂರ ಇರಿ. ಇವು ದೇಹದಲ್ಲಿ ಉರಿಯೂತ ಹೆಚ್ಚಿಸಿ, ಮೊಡವೆಗಳನ್ನು ಬಿಗಡಾಯಿಸುತ್ತವೆ

 ಅತಿಯಾದ ಎಣ್ಣೆ, ತುಪ್ಪ, ಬೆಣ್ಣೆಯಂಥವು ತ್ವಚೆಯಲ್ಲಿನ ಎಣ್ಣೆಯಂಶವನ್ನು ಹೆಚ್ಚಿಸಿ, ಮೊಡವೆಗಳನ್ನು ಹೆಚ್ಚಿಸುತ್ತವೆ

ಮೊಸರಿನಂಥ ಪ್ರೊಬಯಾಟಿಕ್‌ ಅಂಶಗಳು ಆಹಾರದಲ್ಲಿರಲಿ. ಇವು ಚರ್ಮದ ಆರೋಗ್ಯಕ್ಕೆ ಬೇಕು.

ಬೀಜಗಳು ಮತ್ತು ಇಡೀ ಧಾನ್ಯಗಳಲ್ಲಿರುವ ಸಂಕೀರ್ಣ ಪಿಷ್ಟಗಳು ಮತ್ತು ಸತುವಿನ ಅಂಶ ಚರ್ಮದ ಆರೋಗ್ಯವನ್ನು ಸುಧಾರಿಸುತ್ತವೆ

ವಿಟಮಿನ್‌ ಎ ಹೆಚ್ಚಿರುವಂಥ ಗೆಣಸು, ಗಜ್ಜರಿ, ಸೊಪ್ಪು ಮತ್ತು ಹಸಿರು ತರಕಾರಿಗಳು ಆಹಾರದಲ್ಲಿರಲಿ.