Puttakkana Makkalu TV Serial: ಪುಟ್ಟಕ್ಕನ ಮಕ್ಕಳು ವಿಲನ್ ರಾಜೇಶ್ವರಿ ಈಗ ಬೆಣ್ಣೆ ಶಾಂತಮ್ಮ ಅಂತೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ವಿಲನ್ ರಾಜೇಶ್ವರಿ ನಿಜವಾದ ಹೆಸರು  ಹಂಸ ನಾರಾಯಣಸ್ವಾಮಿ

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಅವರ ಫೋಟೊಗೆ ನೆಟ್ಟಿಗರು ಕಮೆಂಟ್‌ ಮೂಲಕ ನಟಿಯನ್ನು ಹೊಗಳುತ್ತಿದ್ದಾರೆ.

 ಹಂಸ ನಾರಾಯಣಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್‌ ಆಗಿರುತ್ತಾರೆ.

 ಹಂಸ  ಈಗ ರೆಡ್ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್ ಹಾಕಿ, ಸಖತ್ ಪೋಸ್ ಕೊಟ್ಟಿದ್ದಾರೆ.

 ಆಂಟಿನೋ.. ಹುಡುಗಿನೋ ಗೊತ್ತಾಗ್ತಿಲ್ಲ ಎಂದು ಒಬ್ಬರು ಒಬ್ರು ಪ್ರಶ್ನೆ ಮಾಡಿದರೆ ಇನ್ನೊಬ್ಬರು ʻಬೆಣ್ಣೆ ಶಾಂತಮ್ಮ..ಬೆಣ್ಣೆ ತರ ಕಾಣಿಸ್ತೀರ ʼʼ ಎಂದು  ಕಮೆಂಟ್ ಹಾಕುತ್ತಿದ್ದಾರೆ.

 ಹಂಸ ನಾರಾಯಣಸ್ವಾಮಿ ಅವರು ರಾಜೇಶ್ವರಿಯಾಗಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಾಣಿಸುತ್ತಿದ್ದಾರೆ. ಪುಟ್ಟಕ್ಕನನ್ನು ಹೇಗಾದರೂ ಮಾಡಿ ಕಷ್ಟಕ್ಕೆ ಸಿಕ್ಕಿ ಬೀಳಿಸುವ ಪಾತ್ರವದು. 

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್‌ಪಿಯಲ್ಲಿಯೂ ಸದಾ ಮುಂದೆ ಇದೆ.