Edited By: Pragati Bhandari

ರಾಮನಗರಿ ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಜಪ ಜೋರಾಗಿದೆ. 

ʻಪ್ರಾಣ ಪ್ರತಿಷ್ಠಾಪನೆʼ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಿವುಡ್ ಸೆಲೆಬ್ರಿಟಿಗಳು ಅಯೋಧ್ಯೆ ಸೇರಿದ್ದಾರೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್  ಈ ವೇಳೆ ವಿಶೇಷವಾಗಿ ಗಮನ ಸೆಳೆದರು. 

ಆಲಿಯಾ ಸೀರೆಯಲ್ಲಿ ಕಂಡರೆ, ರಣಬೀರ್ ಕಪೂರ್ ಬಿಳಿ ಕುರ್ತಾ ಹಾಗೂ ಧೋತಿಯಲ್ಲಿ ಮಿಂಚಿದ್ದಾರೆ.

ಮಾಧುರಿ ದೀಕ್ಷಿತ್ ಅವರು ಹಳದಿ ಸೀರೆಯುಟ್ಟು ಎಂಟ್ರಿ ಕೊಟ್ಟಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. 

ಅಭಿಜಿತ್‌ ಲಗ್ನದ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ.