Sakshi agarwal: ನೆಟ್ಟಿಗನಿಗೆ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ಕೊಟ್ಟ 'ಸಾಫ್ಟ್‌ವೇರ್ ಗಂಡ' ಕನ್ನಡ ಸಿನ್ಮಾ ನಟಿ!

ನಟಿಯರು ಫೋಟೊಶೂಟ್‌ ಮಾಡಿಸುವುದು ಹೊಸತೇನಲ್ಲ. ಆದರೆ ಈ ಬಗ್ಗೆ ನೆಟ್ಟಿಗರು ಒಮ್ಮೊಮ್ಮೆ ಮುಜುಗರಕ್ಕೊಳಗಾಗುವ ರೀತಿಯಲ್ಲಿ ಕಮೆಂಟ್‌ ಮಾಡುತ್ತಾರೆ.

 ಮೂಲತಃ ತಮಿಳು ನಟಿಯಾಗಿರುವ ಸಾಕ್ಷಿ ಅವರಿಗೆ ನೆಟ್ಟಿಗರೊಬ್ಬರು ಮನಬಂದಂತೆ ಕಮೆಂಟ್‌ ಮಾಡಿದ್ದಾರೆ. 

ಇತ್ತೀಚೆಗಷ್ಟೇ ನಟಿ ಸಾಕ್ಷಿ ಅಗರ್ವಾಲ್ ಪಿಂಕ್ ಕೋಟ್ ಹಾಗೂ ಟ್ರಾನ್ಸ್‌ಪರೆಂಟ್‌ ಶರ್ಟ್ ಧರಿಸಿ ಹೊಸ ಫೋಟೊಶೂಟ್‌ ಹಂಚಿಕೊಂಡಿದ್ದರು.

 'ದಕ್ಷಿಣ ಭಾರತದ ನಟಿಯರಿಗೆ ಒಳಉಡುಪು ಇಲ್ಲದೇ ಫೋಟೊಶೂಟ್ ಮಾಡಿಸುವ ಧೈರ್ಯ ಇಲ್ಲ' ಎಂದಿದ್ದಾನೆ ನೆಟ್ಟಿಗ.

ಇದಕ್ಕೆ ಸಾಕ್ಷಿ ಅಗರ್ವಾಲ್ "ಏಕೆಂದರೆ ದಕ್ಷಿಣ ಭಾರತದ ನಟಿಯರಾದ ನಾವು ಪ್ರತಿಭೆ ಮೇಲೆ ನಂಬಿಕೆ ಇಡುತ್ತೇವೆ ಹೊರತು ಸ್ಕಿನ್ ಶೋ ಮೇಲಲ್ಲ" ಎಂದು ತಕ್ಕ ಉತ್ತರ ನೀಡಿದ್ದಾರೆ.

ಇಂತಹ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದಕ್ಕೆ ನಟಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

 2013ರಲ್ಲಿ ಅಟ್ಲಿ ನಿರ್ದೇಶನದ ಎವರ್‌ಗ್ರೀನ್ ಸಿನಿಮಾ ರಾಜ ರಾಣಿಯ ಮೂಲಕ ನಟಿ ಎಂಟ್ರಿ ಕೊಟ್ಟಿದ್ದರು. ಸಾಕ್ಷಿ ಅಗರ್ವಾಲ್ ಬಳಿಕ 2014ರಲ್ಲಿ ಕನ್ನಡದ ಸಾಫ್ಟ್‌ವೇರ್ ಗಂಡ ಎಂಬ ಸಿನಿಮಾದಲ್ಲಿ ನಟಿಸಿದ್ದರು.