Seetha Rama Zee Kannada Serial: ಸಿಹಿ ನಿನ್ನ ಮಾತೇ ಅದ್ಭುತ ಕಣಮ್ಮಾ ಅಂದ್ರು ಫ್ಯಾನ್ಸ್‌; ಈ ಪುಟಾಣಿ ಬಗ್ಗೆ ನಿಮಗೆಷ್ಟು ಗೊತ್ತು?

ಸೀತಾರಾಮ ಸೀರಿಯಲ್‌ ಮುದ್ದು ಪುಟಾಣಿ ಸಿಹಿ ಹೆಸರಿನಷ್ಟೇ ಸ್ವೀಟ್

 ಪ್ರೇಕ್ಷಕರ ಅಚ್ಚುಮೆಚ್ಚಿನ ಸೀತಾ ರಾಮ ಧಾರಾವಾಹಿಯ ಸಿಹಿ ಕನ್ನಡದವಳಲ್ಲ

 ಈ ಮಗುವಿನ ನಿಜವಾದ ಹೆಸರು ರಿತು ಸಿಂಗ್‌. ರಿತು ಸಿಂಗ್‌ ಫ್ಯಾಮಿಲಿ ಈಗ ಬೆಂಗಳೂರಲ್ಲಿ ವಾಸವಾಗಿದ್ದರೂ ಇವರ ಮೂಲ ಮನೆ ಇರುವುದು ನೇಪಾಳದಲ್ಲಿ. 

 ಧಾರಾವಾಹಿಯಲ್ಲಿ  ಈ ಮಗುವಿಗೆ  ಮಧುಮೇಹ ಸಮಸ್ಯೆ ಇದೆ. 

 ರವಿಚಂದ್ರನ್‌ ಅವರನ್ನು ಬಹಳ ಬಹಳ ಇಷ್ಟಪಡ್ತಿದ್ದ ಈ ಪುಟಾಣಿ ಈಗ ಸೀತಾರಾಮದಲ್ಲಿ ಪ್ರಮುಖ ಹೈಲೈಟ್‌. 

 ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ರಿತು ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದಳು.

ಇದೀಗ ಸಿಹಿಯ ಅಭಿನಯ ನೋಡಿ 'ಸಿಹಿ ಕಂದಾ, ನೀನು ನಗ್ತಾ ಇರು', 'ಸಿಹಿ ನಿನ್ನ ಮಾತೇ ಅದ್ಭುತ ಕಣಮ್ಮಾ' ಎಂದು ಕಮೆಂಟ್‌ ಮಾಡುತ್ತಿದ್ದಾರೆ

ಧಾರಾವಾಹಿಯಲ್ಲಿ ಒಮ್ಮೆ ಪ್ರೀತಿ ಕಳೆದುಕೊಂಡಿರುವ ರಾಮ್ ಮತ್ತೆ ಪ್ರೀತಿ ಹುಡುಕಿಕೊಳ್ಳುತ್ತಾನಾ? ಸಿಹಿ ಸೀತಾ-ರಾಮ್‌ರನ್ನು ಒಂದು ಮಾಡುತ್ತಾಳಾ ಎಂದು ಕಾದು ನೋಡಬೇಕಿದೆ.