ಹಾಟ್ ಪ್ಯಾಕ್ ಬಿಸಿನೀರಿನ ಸ್ನಾನ ಅಥವಾ ಕುತ್ತಿಗೆಗೆ ಹ್ಯಾಟ್ ಪ್ಯಾಕ್ ನೀಡುವುದರಿಂದ ಈ ಭಾಗದಲ್ಲಿ ರಕ್ತದ ಹರಿವು ವೃದ್ಧಿಯಾಗಿ,  ನೋವು ಕಡಿಮೆಯಾಗುತ್ತದೆ.

ಕೋಲ್ಡ್ ಪ್ಯಾಕ್ ನೋವಿರುವ ಭಾಗದಲ್ಲಿ ಊತ ಶಮನ ಮಾಡುವುದಕ್ಕೆ ಐಸ್ ಪ್ಯಾಕ್ ನೀಡುವುದು ಪ್ರಯೋಜನಕಾರಿ.

ಲಘು ಮಸಾಜ್ ನೋವಿರುವ ಭಾಗದಲ್ಲಿ ಎಣ್ಣೆಯನ್ನು ಬಳಸಿ ವೃತ್ತಾಕಾರದಲ್ಲಿ ಮಸಾಜ್ ಮಾಡುವುದು ಉತ್ತಮ ಪರಿಣಾಮ ಬೀರುತ್ತದೆ.

ರಿಲಾಕ್ಸ್ ಮಾಡಿ ಪ್ರಾಣಾಯಾಮದಂಥ ದೀರ್ಘ ಉಸಿರಾಟ, ಧ್ಯಾನ, ಯೋಗನಿದ್ರೆಯಂಥ ಕ್ರಿಯೆಗಳಿಂದ ಒತ್ತಡ ಕಡಿಮೆ ಮಾಡಿ.

ನೀರು-ನಿದ್ದೆ-ವ್ಯಾಯಾಮ ಇವು ನಮ್ಮ ಶರೀರಕ್ಕೆ ಪ್ರತಿದಿನ ಬೇಕೇಬೇಕು. ದೇಹಕ್ಕೆ ಸಾಕಷ್ಟು ವ್ಯಾಯಾಮ ದೊರೆತರೆ ನೀರೂ ಬೇಕಾಗುತ್ತದೆ, ನಿದ್ದೆಯೂ ಬರುತ್ತದೆ.