Edited By: Pragati Bhandari

ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಲಾಭದಾಯಕ

ವಿಟಮಿನ್‌ ಸಿ ಭರಿತವಾದ ಈ ಪೇಯ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಗಾಯ ಗುಣವಾಗಲು, ಕೊಲಾಜಿನ್‌ ಹೆಚ್ಚಲು ಅಗತ್ಯವಾದ ಉತ್ಕರ್ಷಣ ನಿರೋಧಕಗಳು ಇದರಲ್ಲಿವೆ

ಜೀರ್ಣಶಕ್ತಿಯನ್ನು ಹೆಚ್ಚಿಸಿ, ಹೊಟ್ಟೆಯುಬ್ಬರದಂಥ ಸಮಸ್ಯೆಗೆ ಕಡಿವಾಣ ಹಾಕುತ್ತದೆ.

ದೇಹದ ಚಯಾಪಚಯ ಹೆಚ್ಚಿಸಿ ತೂಕ ನಿಯಂತ್ರಿಸಲು ನಿಂಬೆ ನೀರು ನೆರವಾಗುತ್ತದೆ

ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕ  

ಚರ್ಮದ ಮೇಲಿನ ಸುಕ್ಕು ನಿಯಂತ್ರಿಸಿ, ತ್ವಚೆಯನ್ನು ಕಾಂತಿಯುಕ್ತವಾಗಿಸುತ್ತದೆ

ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸಲು ಒಳ್ಳೆಯ ಮಾರ್ಗವಿದು.