ಅತಿ ಹೆಚ್ಚು ರೀಸೇಲ್ ವ್ಯಾಲ್ಯೂ ಹೊಂದಿರುವ ಭಾರತದ ಕಾರುಗಳು

ವ್ಯಾಗನ್ - ಆರ್ ಇದು ಬಜೆಟ್ ಕಾರಾಗಿರುವ ಹೊರತಾಗಿಯೂ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಹೊಂದಿದೆ. ಹೊಸ ಕಾರು ಖರೀದಿ ಮಾಡಿದ ಮೂರು ವರ್ಷಗಳಲ್ಲಿ ಇದು ಕೇವಲ 20% ಮೌಲ್ಯ ಕಳೆದುಕೊಳ್ಳುತ್ತದೆ.

ಸ್ವಿಫ್ಟ್​ ಮಾರುತಿ ಸುಜುಕಿಯ ಈ ಜನಪ್ರಿಯ ಕಾರು ಹೊಸದಾದರೂ ಹಳೆಯದಾದರೂ ಸಿಕ್ಕಾಪಟ್ಟೆ ಡಿಮ್ಯಾಂಡ್​​. ಖರೀದಿ ಮಾಡಿ ಎರಡು ವರ್ಷ ದಾಟಿದರೂ ಮೂಲ ಬೆಲೆಯ ಶೇಕಡಾ 80ರಷ್ಟು ಮೌಲ್ಯ ಹೊಂದಿರುತ್ತದೆ.

ಆಲ್ಟೊ 800 ಅತಿ ಹೆಚ್ಚು ಬೇಡಿಕೆ ಹೊಂದಿರುವ ಆಲ್ಟೊ 800 ಕಾರು ಖರೀದಿ ಮಾಡಿ ಮೂರು ವರ್ಷದ ಬಳಿಕವೂ ಮೂಲ ಬೆಲೆಯ ಶೇಕಡಾ 80ರಷ್ಟು ಮೌಲ್ಯವನ್ನು ಮಾಲೀಕರಿಗೆ ನೀಡುತ್ತದೆ.

ಹೋಂಡಾ ಸಿಟಿ ಹೋಂಡಾ ಸಿಟಿ ಭಾರತದಲ್ಲಿರುವ ಉದ್ದದ ಸೆಡಾನ್ ಕಾರು. ಈ ಕಾರು ಖರೀದಿ  ಮಾಡಿದ ಮೂರು ವರ್ಷದ ಬಳಿಕವೂ ಶೇಕಡಾ 75ರಷ್ಟು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. 

ಡಿಸೈರ್​ ಇದು ಜನಪ್ರಿಯ ಸೆಡಾನ್ ಕಾರು. ಖರೀದಿ ಮಾಡಿ ಮುಂದಿನ ವರ್ಷದ ಬಳಿಕ ಮಾರಿದರೂ ಮೂಲ ಬೆಲೆಯ ಶೇಕಡಾ 85ರಷ್ಟು ಪಡದುಕೊಳ್ಳುವುದಕ್ಕೆ ಸಾಧ್ಯವಿದೆ.

ಬ್ರೆಜಾ ಇದು ಟಾಪ್​ ಸೆಲ್ಲಿಂಗ್​ ಎಸ್​ಯುವಿ. ಖರೀದಿ ಮಾಡಿದ ಮೂರು ವರ್ಷದ ಬಳಿಕ ಮಾರಾಟ ಮಾಡಿದರೂ ಕೊಟ್ಟ ದುಡ್ಡಿನ ಶೇಕಡಾ 90ರಷ್ಟು ವಾಪಸ್​ ಪಡೆಯುವ ಸಾಮರ್ಥ್ಯ ಇದಕ್ಕಿದೆ.

ಹ್ಯುಂಡೈ ಕ್ರೆಟಾ ಮಿಡ್ ಸೈಜ್ ಸೆಗ್ಮೆಂಟ್​ನ ಲೀಡರ್​. ಖರೀದಿ ಮಾಡಿದ ಮೂರು ವರ್ಷದ ಬಳಿಕ ಮಾರಿದರೂ ಶೇಕಡಾ 85ರಷ್ಟು ಹಣ ವಾಪಸ್ ಪಡೆಯಲು ಸಾಧ್ಯವಿದೆ.

ಇನ್ನೋವಾ ಕ್ರಿಸ್ಟಾ ಇದು ತುಂಬಾ ಜನಪ್ರಿಯ ಎಂಪಿವಿ. ಮೂರು ವರ್ಷದ ಬಳಿಕ ಮಾರಾಟದ ಮಾಡಿದರೂ ಅದರ ಬೆಲೆ ಮೂಲ ದರಕ್ಕಿಂತ ಶೇಕಡಾ 90ರಷ್ಟು ಉಳಿಸಿಕೊಂಡಿರುತ್ತದೆ.

ಫಾರ್ಚೂನರ್​ 4x4 ಕೆಪಾಸಿಟಿಯ ಈ ಕಾರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ಪರ್ಚೇಸ್​ ಮಾಡಿದ ಎರಡು ವರ್ಷದ ಬಳಿಕ ಮಾರಿದರೂ ಹಾಕಿದ ದುಡ್ಡಿನ ಶೇಕಡಾ 90ರಷ್ಟು ವಾಪಸ್​ ಸಿಗುತ್ತದೆ.