ಸ್ಪಂದನಾ ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಮಾಜಿ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಮಗಳು.

2004ರಲ್ಲಿ ಬೆಂಗಳೂರಿನ ಮಲ್ಲೇಶ್ವರದ ಕಾಫಿಡೇಯಲ್ಲಿ ವಿಜಯ್‌ ಹಾಗೂ ಸ್ಪಂದನಾ ಅವರ ಮೊದಲ ಭೇಟಿಯಾಗಿತ್ತು. 

ವಿಜಯ್‌ಗೆ ಸ್ಪಂದನಾ ಮೇಲೆ ಪ್ರೀತಿ ಹುಟ್ಟಿತು. ಸ್ನೇಹ ಬೆಳೆದು 2007ರ ಆಗಸ್ಟ್‌ 26ರಂದು ಮದುವೆಯಾದರು.

2016ರಲ್ಲಿ ರಿಲೀಸ್ ಆದ ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರಗೆ ಜತೆಯಾಗಿ ಸ್ಪಂದನಾ ನಟಿಸಿದ್ದರು. 

ಈ ಜೋಡಿಗೆ ಮುದ್ದಾದ ಮಗ ಇದ್ದಾನೆ. ಪುತ್ರನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ. 

ತಮಗೆ ಸರ್‌ಪ್ರೈಸ್‌ ಕೊಡುವುದು ತುಂಬ ಇಷ್ಟ ಎಂದು ಸ್ಪಂದನಾ ಹೇಳುತ್ತಿದ್ದರು. 

ಸ್ಪಂದನಾ ತುಂಬ ಶಾಂತ ಸ್ವಭಾವದವರು ಎಂದು ಹಲವು ಬಾರಿ ವಿಜಯ್‌ ರಾಘವೇಂದ್ರ ಹೇಳಿಕೊಂಡಿದ್ದರು.

ಸ್ಪಂದನಾ ಅವರು ಹೃದಯಾಘಾತಕ್ಕೆ ಒಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ಕರಾಳ ಸುದ್ದಿ ಪ್ರಕಟವಾಗಿದೆ. 

ಸ್ಪಂದನಾ ಅವರ ವಯಸ್ಸು ಕೇವಲ 42. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರ ಸಾವಿಗೆ ಕಾರಣ ಸಡನ್‌ ಕಾರ್ಡಿಯಾಕ್‌ ಡೆತ್‌ (Sudden Cardiac death) ಎಂದು ಹೇಳಲಾಗುತ್ತಿದೆ.