Edited By: Pragati Bhandari

 ಆಹಾರದಲ್ಲಿ ಕರಗಬಲ್ಲ ನಾರಿನ ಪ್ರಮಾಣವನ್ನು ಹೆಚ್ಚಿಸಿದರೆ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿತ ಮಾಡಬಹುದು.

ಇಡೀ ಧಾನ್ಯಗಳು, ಬಾಳೆಹಣ್ಣು, ಬೆರ್ರಿಗಳು, ಬೆಣ್ಣೆ ಹಣ್ಣು ಇತ್ಯಾದಿಗಳಿಂದ ದಿನಕ್ಕೆ  30 ಗ್ರಾಂನಷ್ಟು ನಾರು  ದೇಹಕ್ಕೆ ಬೇಕು

ವಿಟಮಿನ್‌ ಸಿ ಹೆಚ್ಚಿರುವ ನೆಲ್ಲಿಕಾಯಿ, ಕಿತ್ತಳೆಹಣ್ಣು, ದ್ರಾಕ್ಷಿಯಂಥವು ರಕ್ತನಾಳಗಳು ಕಟ್ಟಿಕೊಳ್ಳುವುದನ್ನು ತಡೆಯುತ್ತವೆ

ಗ್ರೀನ್‌ ಟೀಯಲ್ಲಿರುವ ಪಾಲಿಫೆನಾಲ್‌ಗಳು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತವೆ  

ಬಾದಾಮಿಯಂಥ ಬೀಜಗಳು ದೇಹದಲ್ಲಿ ಜಮೆಯಾಗುವ ಎಲ್‌ಡಿಎಲ್‌ ಕಡಿತಕ್ಕೆ ನೆರವಾಗುತ್ತವೆ

ವಾಲ್‌ನಟ್‌ನಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲ, ಫೋಟೊಸ್ಟೆರೋಲ್‌ಗಳು ಕೊಲೆಸ್ಟ್ರಾಲ್‌ ಕಡಿತಕ್ಕೆ  ಸಾಥ್‌ ನೀಡುತ್ತವೆ

ನಿಂಬೆಹಣ್ಣಿನಲ್ಲಿರುವ ಪೆಕ್ಟಿನ್‌ ಅಂಶವು ಕೊಲೆಸ್ಟ್ರಾಲನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ

ಪಾಲಕ್‌ನಲ್ಲಿರುವ ಸ್ಟೆರೋಲ್‌ಗಳು ಕೊಲೆಸ್ಟ್ರಾಲ್‌ ಹೀರಿಕೊಳ್ಳದಂತೆ ದೇಹವನ್ನು ತಡೆಯುತ್ತವೆ