ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಕ್ಕೆ ಮುಖ್ಯ ದ್ವಾರವಿರುವ ಮನೆ ವಾಸಕ್ಕೆ ಅತ್ಯಂತ ಯೋಗ್ಯ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಪಶ್ಚಿಮ ಮತ್ತು ಉತ್ತರಕ್ಕೆ ಬಾಗಿಲಿರುವ ಮನೆ ಸಹ ಶುಭವೆಂದೇ ಹೇಳಲಾಗುತ್ತದೆ.

ದೋಷ ಪರಿಹಾರಕ್ಕೆ ಹೀಗೆ ಮಾಡಿ! ಮುಖ್ಯವಾಗಿ ದಕ್ಷಿಣ ದಿಕ್ಕಿನ ದೋಷವನ್ನು ಪರಿಹರಿಸಿಕೊಳ್ಳಲು ಮನೆಯ ಮುಖ್ಯದ್ವಾರದ ಮೇಲೆ ಪಂಚಮುಖಿ ಆಂಜನೇಯನ ಚಿತ್ರವನ್ನು ಹಾಕಬೇಕು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ.

ದಕ್ಷಿಣ ದ್ವಾರವಿರುವ ಮನೆಯ ಮುಖ್ಯ ದ್ವಾರದ ಎದುರಿಗೆ ಸ್ವಲ್ಪ ದೂರದಲ್ಲಿ ಕಹಿಬೇವಿನ ಗಿಡವನ್ನು ನೆಡುವುದು ಒಳ್ಳೆಯದು. ಇದರಿಂದ ದಕ್ಷಿಣ ದಿಕ್ಕಿನ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ.

ಆಗ್ನೇಯ ಮೂಲೆಯಲ್ಲಿ ಮುಖ್ಯದ್ವಾರವಿರಲಿ ದಕ್ಷಿಣ ದಿಕ್ಕಿನ ಮನೆಯಾದರೂ ಮುಖ್ಯದ್ವಾರ ಆಗ್ನೇಯ ಮೂಲೆಯಲ್ಲಿದ್ದರೆ, ವಾಸ್ತು ದೃಷ್ಟಿಯಿಂದ ಇದು ಒಳ್ಳೆಯದೆಂದು ಹೇಳಲಾಗುತ್ತದೆ. 

ಉತ್ತರ ಮತ್ತು ಪೂರ್ವ ದಿಕ್ಕಿಗೆ ಹೆಚ್ಚು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಕಡಿಮೆ ಖಾಲಿ ಜಾಗವನ್ನು ಬಿಟ್ಟರೆ ದಕ್ಷಿಣದ ದೋಷ ನಿವಾರಣೆಯಾಗುತ್ತದೆ. 

ಕನ್ನಡಿಯಿಂದ ದೋಷ ನಿವಾರಣೆ ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆಯಲ್ಲಿ ಬಾಗಿಲಿನ ಎದುರಿಗೆ ದೊಡ್ಡ ಕನ್ನಡಿ ಹಾಕುವುದು ಉತ್ತಮ.

ಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ, ಬರುವವರ ಪೂರ್ಣ ಪ್ರತಿಬಿಂಬ ಕನ್ನಡಿಯಲ್ಲಿ ಕಾಣುವಂತೆ ಮಾಡುವುದು ಸೂಕ್ತ.