Edited By: Pragati Bhandari

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಗಂಧರ್ವರು, ರಾಕ್ಷಸರು ಎಂಬ ಎರಡು ಗುಂಪುಗಳಾಗಿದೆ

ಮನರಂಜನೆಗಿಂತ ವಿವಾದಕ್ಕೆ ಗುರಿಯಾಗಲಿದೆಯಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.

ಕಾರ್ತಿಕ್, ತನಿಷಾ, ಸಂಗೀತಾ, ಡ್ರೋನ್ ಪ್ರತಾಪ್, ಸಿರಿ, ಅವಿನಾಶ್ ಅವರು ರಾಕ್ಷಸರಾಗಿದ್ದರೆ, ವಿನಯ್ ಗೌಡ, ತುಕಾಲಿ ಸ್ಟಾರ್ ಸಂತು, ಪವಿ, ನಮ್ರತಾ ಗೌಡ, ವರ್ತೂರು ಸಂತೋಷ್ ಅವರು ಗಂಧರ್ವರಾಗಿದ್ದರು. 

ಈ ಟಾಸ್ಕ್‌ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ನೇಹಿತ್‌ ಮನೆಯ ಕ್ಯಾಪ್ಟನ್ ಆಗಿ ಸರಿಯಾಗಿ ಟೀಂ ಮಾಡಿರಲಿಲ್ಲ. ಮಾತ್ರವಲ್ಲ ಹೆಚ್ಚಾಗಿ ವಿನಯ್‌ ಟೀಂ ಅವರ ಪರವಾಗಿಯೇ ನಿಂತಿದ್ದು, ರಾಕ್ಷಸರ ಟೀಂ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೊದಲಿಗೆ ಸ್ನೇಹಿತ್‌ ಕೂಡ ಟೀಂನಲ್ಲಿ ಸದಸ್ಯರನ್ನು ಸೇರಿಸುವಾಗ ಬ್ಯಾಲೆನ್ಸ್ ಆಗುವ ರೀತಿ ಮಾಡಿಲ್ಲ.

 ತನಿಷಾ ಕೂಡ ವಿನಯ್‌ ಅವರಿಂದ ಕಾಲು ಒತ್ತಿಸಿಕೊಂಡರು. 

ಸಂಗೀತಾ ಅವರು ವಿನಯ್‌ಗೆ ಕೋಪ ತರಿಸುವ ಮಾತು ಹೇಳಿದ್ದಾರೆ, ಎಗರಿಕೊಂಡು ಎಗರಿಕೊಂಡು ನನ್ನ ಹಿಂದೆ ಬನ್ನಿ ಅಂತ ಕೂಡ ಹೇಳಿದ್ದರು.  ವಿನಯ್ ಗೌಡ ಅವರು ʻʻನನ್ನ ಪಾತ್ರದಿಂದ ಹೊರಗೆ ಬಂದರೆ ಆ ವಿಷಯವೇ ಬೇರೆʼʼಎಂದು ಗರ್ಜಸಿದ್ದಾರೆ. 

ಹುಚ್ಚೇಟು ಹೊಡೆಯುತ್ತೇನೆ. ನಾನು ಒಮ್ಮೆ ಪಾತ್ರದಿಂದ ಹೊರಗಡೆ ಬರಲಿ, ಆಗ ಇದೆ” ಎಂದು ವಿನಯ್‌ ಹೇಳಿದ್ದಾರೆ. ಈ ಮಾತಿಗೆ ಪ್ರೇಕ್ಷಕರು ಕೂಡ ವಿನಯ್‌ ಮಾತು ಒಂದರ್ಥದಲ್ಲಿ ಸತ್ಯ ಎನ್ನುತ್ತಿದ್ದಾರೆ.

ಒಂದು ವೇಳೆ ಇದೇ ಉಲ್ಟಾ ಆಗಿ ವಿನಯ್‌ ಟೀಂ ರಾಕ್ಷಸರಾದರೆ, ಮನೆಯ ವಾತಾವರಣ ಇನ್ನಷ್ಟು ವಿವಾದಕ್ಕೆ ಸಿಲುಕಲಿದೆ.