ಏನಿದು ಅವಿಶ್ವಾಸ ನಿರ್ಣಯ?

ಏನಿದು ಅವಿಶ್ವಾಸ ನಿರ್ಣಯ?   ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸುತ್ತವೆ. ಚರ್ಚೆ ನಡೆಯುತ್ತದೆ. ಸರ್ಕಾರವು ವಿಶ್ವಾಸ ಮತ ಸಾಬೀತುಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರ ಪತನವಾಗುತ್ತದೆ.

ಲೋಕಸಭೆಯಲ್ಲಿ ಮಾತ್ರ... ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮಾತ್ರವೇ ಮಂಡಿಸಲು ಅವಕಾಶವಿದೆ. ರಾಜ್ಯಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿಲ್ಲ.

50 ಸಂಸದರ ಬೆಂಬಲ ಬೇಕು ಯಾವುದೇ ಸಂಸದರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 50 ಲೋಕಸಭೆ ಸದಸ್ಯರ ಬೆಂಬಲ ಪಡೆಯಬೇಕಾಗುತ್ತದೆ.

10 ದಿನದಲ್ಲಿ ಚರ್ಚೆ  ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ 10 ದಿನದೊಳಗೇ ಸ್ಪೀಕರ್ ಲೋಕಸಭೆಯಲ್ಲಿ ಚರ್ಚೆ ನಡೆಸಬೇಕಾಗುತ್ತದೆ. 

ಪಿಎಂ ರಾಜೀನಾಮೆ ನೀಡಬೇಕು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಜಯವಾದರೆ ಪ್ರಧಾನಿ ರಾಜೀನಾಮೆ ನೀಡಬೇಕಾಗುತ್ತದೆ. ಪರಿಣಾಮ ಸರ್ಕಾರ ಪತನ ವಾಗುತ್ತದೆ.

ವಿ. ಪಿ. ಸಿಂಗ್ ಸರ್ಕಾರ ಪತನ 1990ರಲ್ಲಿ ವಿ.ಪಿ. ಸಿಂಗ್ ಸರ್ಕಾರವು ಅವಿಶ್ವಾಸ ನಿರ್ಣಯದಲ್ಲಿ ಸೋಲು ಕಂಡಿತ್ತು ಮತ್ತು ಸಿಂಗ್ ರಾಜೀನಾಮೆ ನೀಡಬೇಕಾಯಿತು.

ವಾಜಪೇಯಿ 2 ಬಾರಿ ಎದುರಿಸಿದ್ದರು 1999ರಲ್ಲಿ ಪಿಎಂ ವಾಜಪೇಯಿ ಅವಿಶ್ವಾಸ ನಿರ್ಣಯದಲ್ಲಿ ಸೋತು, ಪಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. 2003ರಲ್ಲಿ ಅವಿಶ್ವಾಸ ನಿರ್ಣಯವನ್ನು ಗೆದ್ದಿದ್ದರು.

ಪ್ರಥಮ ಅವಿಶ್ವಾಸ ನಿರ್ಣಯ 1963 ಆಗಸ್ಟ್‌ನಲ್ಲಿ ಪ್ರಥಮ ಪ್ರಧಾನಿ ನೆಹರು ಅವಿಶ್ವಾಸ ನಿರ್ಣಯ ಎದುರಿಸಿದ್ದರು. ಲೋಕಸಭೆಯಲ್ಲಿ ದಾಖಲಾದ ಮೊದಲ ಅವಿಶ್ವಾಸ ನಿರ್ಣಯವಿದು. ಆಗ ಈ ನಿರ್ಣಯಕ್ಕೆ ಸೋಲಾಗಿತ್ತು.