ಒಳ್ಳೆ ಹುಡ್ಗ ಪ್ರಥಮ್ ಮದುವೆಯಾಗಲಿರುವ ಹುಡುಗಿಯ ಹಿನ್ನೆಲೆ ಏನು?

ಬಿಗ್‌‌ ಬಾಸ್ ಸೀಸನ್‌-4ರ ವಿಜೇತ,‌ ನಟ ಪ್ರಥಮ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಆಗಿ ಉಂಗುರ ಬದಲಿಸಿಕೊಂಡು ಎಂಗೇಜ್‌ಮೆಂಟ್‌ ಮಾಡಿಕೊಂಡರು. 

 'ಕರ್ನಾಟಕದ ಅಳಿಯ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಥಮ್ ಶೀಘ್ರದಲ್ಲೇ ಮಂಡ್ಯದ ಅಳಿಯ ಆಗಲಿದ್ದಾರೆ. ಅಂದರೆ ಮಂಡ್ಯ ಮೂಲದ ಭಾನುಶ್ರೀ ಜತೆ ಮದುವೆ ಆಗಲಿದ್ದಾರೆ.

ಪ್ರಥಮ್ ಮದುವೆ ಆಗುತ್ತಿರುವ ಭಾನುಶ್ರೀ ಸದ್ಯ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡಲು ತಯಾರಿ ನಡೆಸುತ್ತಿದ್ದಾರೆ.

ಮೊದಲಿನಿಂದಲೂ ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗುವುದಾಗಿ ಹೇಳುತ್ತಾ ಬರುತ್ತಿದ್ದರು. ಹೇಳಿದಂತೆಯೇ ಹಳ್ಳಿಯ ಬಡ ಕುಟುಂಬದ ಹುಡುಗಿಯನ್ನ ಮದುವೆ ಆಗಲು ಮುಂದಾಗಿದ್ದಾರೆ.

ನಿಶ್ಚಿತಾರ್ಥದ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಥಮ್‌, ಇವತ್ತು ನನ್ನ ಎಂಗೇಜ್‌ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜತೆಯಾಗಿದ್ದೇನೆ ಎಂದರು. 

ನನ್ನ ಎಂಗೇಜ್‌ಮೆಂಟ್ ಈ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ನೇಹಿತರು, ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಎಂಬ ಕಾರಣಕ್ಕೆ ವಿಚಾರ ತಿಳಿಸಿದ್ದೇನೆ ಎಂದರು

ಬಿಗ್‌ಬಾಸ್ ಮನೆಯಲ್ಲಿ ತಮ್ಮ ನಾನ್‌ಸ್ಟಾಪ್‌ ಮಾತಿನಿಂದ ಪ್ರಥಮ್ ಗಮನ ಸೆಳೆದಿದ್ದರು. 100 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದು ಗೆದ್ದು ಬಂದರು. 'ಎಂಎಲ್‌ಎ', 'ದೇವರಂಥ ಮನುಷ್ಯ', 'ರಾಜು ಕನ್ನಡ ಮೀಡಿಯಂ', 'ನಟ ಭಯಂಕರ' ಸಿನಿಮಾಗಳಲ್ಲಿ ನಟಿಸಿದ್ದಾರೆ.