Edited By: Pragati Bhandari

ಕ್ಯಾಲ್ಶಿಯಂ ಮೂಳೆಗಳಿಗೆ ಶಕ್ತಿ ತುಂಬಲು, ಸ್ನಾಯು ಮತ್ತು ನರಗಳ ಕೆಲಸಕ್ಕೆ ಮತ್ತು ರಕ್ತ ಹೆಪ್ಪುಗಟ್ಟುವುದಕ್ಕೆ ಇದು ಅಗತ್ಯ 

ಕಬ್ಬಿಣ ಶಕ್ತಿ ಉತ್ಪಾದನೆಗೆ ಮತ್ತು ಆಮ್ಲಜನಕ ಸಾಗಾಣಿಕೆಗಳಿಗೆ ಈ ಖನಿಜವೇ ಹೊಣೆ

ಮೆಗ್ನೀಶಿಯಂ ಸ್ನಾಯು ಮತ್ತು ನರಗಳ ಕೆಲಸಕ್ಕೆ, ಮೂಳೆಗಳ ಬಲವರ್ಧನೆಗೆ ಹಾಗೂ ಚಯಾಪಚಯಕ್ಕೆ ಈ ಖನಿಜ ಬೇಕು

ಜಿಂಕ್ ಚರ್ಮದ ಆರೋಗ್ಯಕ್ಕೆ, ಪ್ರತಿರೋಧಕತೆ ಹಾಗೂ ದೇಹದ ರಿಪೇರಿ ಕೆಲಸಕ್ಕೆ ಸತು ಆವಶ್ಯಕ 

ಪೊಟಾಶಿಯಂ ದೇಹದಲ್ಲಿ ಎಲೆಕ್ಟ್ರೋಲೈಟ್‌ ಸಮತೋಲನಕ್ಕೆ, ಸ್ನಾಯುಗಳ ಸಂಚಲನಕ್ಕೆ ಹಾಗೂ ನರಗಳ ಆರೋಗ್ಯಕ್ಕಿದು ಬೇಕು

ಸೋಡಿಯಂ ಎಲೆಕ್ಟ್ರೋಲೈಟ್‌ ಸಮತೋಲನಕ್ಕೆ, ಸ್ನಾಯು ಮತ್ತು ನರಗಳ ಕ್ಷಮತೆಗೆ ಇದು ಅಗತ್ಯ

ಫಾಸ್ಫರಸ್ ಕೋಶಗಳ ಕ್ಷೇಮಕ್ಕೆ, ಮೂಳೆಗಳ ಶಕ್ತಿಗೆ ಮತ್ತು ಸಮರ್ಪಕ ಚಯಾಪಚಯಕ್ಕಿದು ಬೇಕು 

ಜೊತೆಗೆ ತಾಮ್ರ, ಅಯೋಡಿನ್‌, ಸೆಲೆನಿಯಂ, ಫ್ಲುರೈಡ್‌ ಮುಂತಾದ ಖನಿಜಗಳು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ