Women cricketers who won the hearts of fans with their game and beauty

ಎಲಿಸ್‌ ಪೆರಿ: ಆಸ್ಟ್ರೇಲಿಯಾ ತಂಡದ ಪ್ರಧಾನ ಆಲ್‌ರೌಂಡರ್‌ ಇವರು. ವೇಗದ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ಮಿಂಚುತ್ತಿದ್ದಾರೆ.

ಸ್ಮೃತಿ ಮಂಧಾನಾ : ಮುಂಬಯಿ ಮೂಲದ ಈ ಆಟಗಾರ್ತಿ ಭಾರತ ತಂಡದ ಆರಂಭಿಕ ಬ್ಯಾಟರ್‌. ಈ ಎಡಗೈ ಬ್ಯಾಟರ್‌ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಕೈನಾತ್‌ ಇಮ್ತಿಯಾಜ್‌ : ಪಾಕಿಸ್ತಾನದ ಈ ವೇಗಿಗೆ ಸೌಂದರ್ಯದ ಕಾರಣಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. 30 ವರ್ಷದ ಇವರಿಗೆ  ಜೂಲಾನ್‌ ಗೋಸ್ವಾಮಿಯೇ ರೋಲ್‌ ಮಾಡೆಲ್‌. 

ಸುನೆ ಲುಸ್‌ : ದಕ್ಷಿಣ ಆಫ್ರಿಕಾದ ಈ ಸ್ಪಿನ್ನರ್‌ ಎದುರಾಳಿ ತಂಡದ ಬ್ಯಾಟರ್‌ಗಳಿಗೆ ದುಸ್ವಪ್ನ ಎನಿಸಿಕೊಂಡಿದ್ದಾರೆ. ಅದೇ ರೀತಿ ಸೌಂದರ್ಯದ ಮೂಲಕ ಯುವ ಮನಸ್ಸುಗಳ ನಿದ್ದೆ ಕದ್ದಿದ್ದಾರೆ.

ಕ್ಯಾಥ್ರಿನ್‌ ಕ್ರಾಸ್‌: ಇವರು ಬಲಗೈ ವೇಗಿ. ನೀಳ ಮೂಗು ಹಾಗೂ ತೀಕ್ಷ್ಣ ನೋಟದ  ಮೂಲಕ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದವರು. ಇವರಿಗೆ ಐಪಿಎಲ್‌ನ ಸಿಎಸ್‌ಕೆ ತಂಡ ಫೇವರಿಟ್‌.

ಸಾರಾ ಟೇಲರ್‌ :  ಅತ್ಯಂತ ಜನಪ್ರಿಯ ಮಹಿಳಾ ಕ್ರಿಕೆಟರ್‌ ಸಾರಾ. ಇಂಗ್ಲೆಂಡ್‌ ತಂಡದ ಕೀಪರ್‌. 33 ವರ್ಷದ ಈಗೆ ಸೌಂದರ್ಯದ ಮೂಲಕವೂ ವಿಶ್ವ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದಾರೆ.

ಜಹನಾರಾ ಆಲಂ :  ಬಾಂಗ್ಲಾದೇಶದ ಈ ಆಟಗಾರ್ತಿ ಪ್ರತಿಭೆ ಮತ್ತು ಸೌಂದರ್ಯದ ಸಮ್ಮಿಲನ. ಬಾಂಗ್ಲಾದೇಶದ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ 28 ವರ್ಷದ ಈಗೆ ಕಣ್ಮಣಿ.

ಹೋಲಿ ಫೆರ್ಲಿಂಗ್‌ :  ಆಸ್ಟ್ರೇಲಿಯಾವನ್ನು 3 ವರ್ಷ ಮಾತ್ರ ಪ್ರತಿನಿಧಿಸಿದ್ದರು. ಆದರೆ, ಅಷ್ಟರಲ್ಲೇ ಅವರು ಸೌಂದರ್ಯದ ಮೂಲಕ ಮನ ಸೆಳೆದಿದ್ದರು. ಇವರು ಬಲಗೈ ವೇಗಿ.