Site icon Vistara News

Team India ಹಿರಿಯ ಬ್ಯಾಟ್ಸ್‌ಮನ್‌ಗಳ ದಂಡು ಯುವ ಬೌಲರ್‌ನ ದಾಳಿಗೆ ಉಡೀಸ್‌

Team India

ಲಿಸೆಸ್ಟರ್‌ (ಇಂಗ್ಲೆಂಡ್‌): Team India ಹಿರಿಯ ಬ್ಯಾಟ್ಸ್‌ಮನ್‌ಗಳು ಗುರುವಾರ ಆರಂಭಗೊಂಡಿರುವ ಚತುರ್ದಿನಗಳ ಅಭ್ಯಾಸ ಪಂದ್ಯದಲ್ಲಿ ನಿರಾಶಾದಾಯಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ಪ್ರಮುಖವಾಗಿ ವಿರಾಟ್‌ ಕೊಹ್ಲಿ (೩೩) ಹಾಗೂ ರೋಹಿತ್‌ ಶರ್ಮ (25) ಎದುರಾಳಿ ಲ್ಯಾಸೆಸ್ಟರ್‌ಶೈರ್‌ ತಂಡದ ಯುವ ಬೌಲರ್‌ ರೋಮನ್‌ ವಾಕರ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದಾರೆ.

ರೋಮನ್‌ ವಾಕರ್‌ ೧೧ ಓವರ್‌ಗಳನ್ನು ಎಸೆದು ೨೪ ರನ್‌ಗಳಿಗೆ ೫ ವಿಕೆಟ್‌ ಕಬಳಿಸುವ ಮೂಲಕ ಭಾರತ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಅಚ್ಚರಿಯೆಂದರೆ ರೋಮನ್‌ ವಾಕರ್‌ ಇದುವರೆಗೆ ಒಂದೇ ಒಂದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿಲ್ಲ. ಆದರೂ, ತಮ್ಮ ಪ್ರಭಾವಿ ಬೌಲಿಂಗ್‌ ಮೂಲಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಹನುಮ ವಿಹಾರಿ, ಶಾರ್ದುಲ್‌ ಠಾಕೂರ್‌ ಹಾಗೂ ರವೀಂದ್ರ ಜಡೇಜಾ ಅವರಂಥ ಅನುಭವಿ ಆಟಗಾರರ ವಿಕೆಟ್‌ ಪಡೆದು ಕ್ರಿಕೆಟ್‌ ಪಂಡಿತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರೋಮನ್‌ ವಾಕರ್‌ ಎರಡು ಲಿಸ್ಟ್‌ ಎ ಮತ್ತು ೧೩ ಟಿ೨೦ ಪಂದ್ಯಗಳನ್ನು ಆಡಿದ್ದು, ಒಟ್ಟಾರೆ ೧೮ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Team India ಪತನ

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ವೈಫಲ್ಯದ ಬ್ಯಾಟಿಂಗ್ ಪ್ರದರ್ಶನ ನೀಡಿತು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಶ್ರೀಕರ್‌ ಭರತ್‌ (೭೦) ಅಜೇಯ ಅರ್ಧ ಶತಕ ಬಾರಿಸುವ ಮೂಲಕ ತಂಡಕ್ಕೆ ಆಧಾರವಾಗಿದ್ದು ಹೊರತುಪಡಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಮಳೆಯ ಕಾರಣಕ್ಕೆ ಮೊದಲ ದಿನದಾಟ ಬೇಗ ಮುಕ್ತಾಯಗೊಂಡಾಗ ಭಾರತ ತಂಡ ೬೦.೨ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೨೪೬ ರನ್‌ ಬಾರಿಸಿದೆ.

ಆರಂಭಿಕರಾಗಿ ಕ್ರಿಸ್‌ಗೆ ಇಳಿದ ರೋಹಿತ್‌ ಶರ್ಮ ಹಾಗೂ ಶುಬ್ಮನ್‌ ಗಿಲ್‌ (೨೧) ಮೊದಲ ವಿಕೆಟ್‌ಗೆ ೩೫ ರನ್‌ ಬಾರಿಸಿ ಬೇರ್ಪಟ್ಟ ಕಾರಣ ಭಾರತ ತಂಡಕ್ಕೆ ಆರಂಭಿಕ ಹಿನ್ನಡೆ ಉಂಟಾಯಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ಹನುಮ ವಿಹಾರಿ ೩ ರನ್‌ಗಳಿಗೆ ಔಟಾಗಿ ವಾಪಸ್‌ ಡಗ್‌ಔಟ್‌ಗೆ ತೆರಳಿದರೆ ವಿರಾಟ್‌ ಕೊಹ್ಲಿಯೂ ಆರಂಭಿಕ ಕುಸಿತ ತಡೆಯಲು ವಿಫಲಗೊಂಡರು. ಬಳಿಕ ಕ್ರಿಸ್‌ಗೆ ಇಳಿದ ಶ್ರೇಯಸ್ ಅಯ್ಯರ್‌ ಶೂನ್ಯ ಸುತ್ತಿದರು. ಹೀಗಾಗಿ ಭಾರತ ತಂಡ ೮೧ ರನ್‌ಗಳಿಗೆ ೫ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಆಡಲು ಇಳಿದ ರವೀಂದ್ರ ಜಡೇಜಾ ೧೩ ರನ್‌ಗಳಿಗೆ ಔಟಾದರು. ಈ ವೇಳೆ ಆಡಲು ಇಳಿದ ಶ್ರೀಕರ್‌ ಭರತ್‌ ಉತ್ತಮವಾಗಿ ಬ್ಯಾಟ್‌ ಬೀಸಿ ತಂಡದ ವೈಫಲ್ಯಕ್ಕೆ ತೇಪೆ ಹಚ್ಚಿದರು. ಶಾರ್ದುಲ್‌ ಠಾಕೂರ್‌ ೬ ರನ್‌ ಮಾಡಿ ನಿರಾಸೆಯಿಂದ ವಾಪಸ್‌ ತೆರಳಿದರೆ, ಉಮೇಶ್‌ ಯಾದವ್‌ ಉಪಯುಕ್ತ ೨೩ ರನ್‌ ಬಾರಿಸಿದರು. ಮೊಹಮ್ಮದ್ ಶಮಿ ೧೮ ರನ್‌ ಬಾರಿಸಿ ಎಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ,

ಸಂಕ್ಷಿಪ್ತ ಸ್ಕೋರ್‌

ಭಾರತ ಮೊದಲ ಇನಿಂಗ್ಸ್‌: ೬೦.೨ ಓವರ್‌ಗಳಲ್ಲಿ ೮ ವಿಕೆಟ್‌ಗೆ ೨೪೬ (ಶ್ರೀಕರ್‌ ಭರತ್‌ ೭೦*, ವಿರಾಟ್‌ ಕೊಹ್ಲಿ ೩೩, ರೋಹಿತ್‌ ಶರ್ಮ ೨೫, ಉಮೇಶ್‌ ಯಾದವ್‌ ೨೩, ಮೊಹಮ್ಮದ್‌ ಶಮಿ ೧೮; ರೋಮನ್‌ ವಾಕರ್‌ ೨೪ಕ್ಕೆ೫, ಪ್ರಸಿದ್ಧ್‌ ಕೃಷ್ಣ ೩೭ಕ್ಕೆ೨).

ಅಂಪೈರ್‌ ದುರುಗುಟ್ಟಿದ ಕೊಹ್ಲಿ

ರೋಮನ್‌ ವಾಕರ್‌ ಎಸೆತಕ್ಕೆ ಎಲ್‌ಬಿಡಬ್ಯ್ಲು ಆದ ವಿರಾಟ್‌ ಕೊಹ್ಲಿ ಅಂಪೈರ್‌ ಕಡೆ ದುರುಗುಟ್ಟಿ ನೋಡಿದ ಪ್ರಸಂಗವೂ ನಡೆಯಿತು. ಕಳೆದ ಹಲವು ಸಮಯಗಳಿಂದ ಬ್ಯಾಟಿಂಗ್‌ ವೈಫಲ್ಯ ಎದುರಿಸುತ್ತಿರುವ ವಿರಾಟ್‌ ಕೊಹ್ಲಿ ಔಟಾದ ತಕ್ಷಣ ತಾಳ್ಮೆಯೂ ಕಳೆದುಕೊಳ್ಳುತ್ತಿದ್ದಾರೆ. ಅಂತೆರೆ ವಾಕರ್‌ ಮನವಿ ಪುರಸ್ಕರಿಸಿ ಎಲ್‌ಬಿಡಬ್ಲ್ಯು ಔಟ್ ನೀಡಿದ ಅಂಪೈರ್‌ ಕಡೆಗೂ ಕೆಂಗಣ್ಣು ಬೀರಿದರು.

ಇದನ್ನೂ ಓದಿ| ಟೆಸ್ಟ್‌ ಪಂದ್ಯಕ್ಕೆ covid-19 ಕಾಟ: ವಿರಾಟ್‌ ಕೊಹ್ಲಿಗೂ ಕೊರೊನಾ

Exit mobile version