ಫ್ಲೋರಿಡಾ : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಬೆನ್ನು ನೋವಿನ ಸಮಸ್ಯೆಯಿಂದ ಸುಧಾರಿಸಿಕೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟಿ೨೦ ಸರಣಿಯ (IND vs WI T20) ಪಂದ್ಯಗಳಿಗೆ ಅವರು ಲಭ್ಯರಿರುತ್ತಾರೆ ಎಂದು ಹೇಳಲಾಗಿದೆ. ವಾರ್ನರ್ ಪಾರ್ಕ್ ಸ್ಟೇಡಿಯಮ್‌ನಲ್ಲಿ ಆಗಸ್ಟ್‌೨ರಂದು ನಡೆದಿದ್ದ ಪಂದ್ಯದ ವೇಳೆ ರೋಹಿತ್ ಶರ್ಮ ಅವರು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರ ಗಾಯದ ಸಮಸ್ಯೆಯ ಆತಂಕಕ್ಕೆ ಒಳಗಾಗಿದ್ದರು.
ಟೀಮ್ ಇಂಡಿಯಾವು ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಐದು ಪಂದ್ಯಗಳ ಸರಣಿಯ ಇದುವರೆಗಿನ ೩ ಪಂದ್ಯಗಳಲ್ಲಿ ೨-೧ರ ಮುನ್ನಡೆ ಪಡೆದುಕೊಂಡಿದ್ದಾರೆ. ಆಗಸ್ಟ್ ೬ರಂದು ನಡೆಯುವ ಪಂದ್ಯದಲ್ಲಿ ಗೆದ್ದರೆ ಸರಣಿ ಭಾರತದ ಕೈವಶವಾಗಲಿದೆ. ಆದರೆ, ಮೂರನೇ ಪಂದ್ಯದ ವೇಳೆ ರೋಹಿತ್ ಶರ್ಮ ಗಾಯಗೊಂಡಿರುವ ಕಾರಣ ಭಾರತ ತಂಡಕ್ಕೆ ಹಿನ್ನಡೆ ಉಂಟು ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಗಾಐದ ಆತಂಕ ಈಗ ಕೊನೆಯಾಗಿದೆ.
ಮೂರನೇ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ ೭ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ವಿಂಡೀಸ್ ನೀಡಿದ ೧೬೫ ರನ್‌ಗಳ ಗುರಿಯನ್ನು ಮೂರು ವಿಕೆಟ್ ಕಳೆದುಕೊಂಡ ೧೯ ಓವರ್‌ಗಳಲ್ಲಿಯೇ ಮೀರಿತ್ತು. ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಬಂದ ರೋಹಿತ್ ಶರ್ಮ ಒಂದು ಸಿಕ್ಸರ್ ಹಾಗೂ ಫೋರ್ ಸಮೇತ ೫ ಎಸೆತಗಳಲ್ಲಿ ೧೧ ರನ್ ಬಾರಿಸಿ ಉತ್ತಮ ಆರಂಭ ತಂದುಕೊಟ್ಟಿದ್ದರು. ಈ ವೇಳೆ ಅವರು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಫಿಸಿಯೊ ಪುನಶ್ಚೇತನ ನೀಡಲು ಯತ್ನಿಸಿದರೂ ಸುಧಾರಿಸಿಕೊಳ್ಳಲು ಆಗದೇ ಮೈದಾನ ತೊರೆದಿದ್ದರು. ಹೀಗಾಗಿ ಅವರು ದೊಡ್ಡ ಪ್ರಮಾಣದಲ್ಲಿ ಗಾಯಗೊಂಡಿದ್ದರು, ಮುಂದಿನ ಏಷ್ಯಾ ಕಪ್ ತಂಡದ ಸಂಯೋಜನೆಗೂ ಭಾರತ ತಂಡಕ್ಕೆ ಅಡಚಣೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ, ಯಾವುದೇ ಆತಂಕವಿಲ್ಲದೆ, ರೋಹಿತ್ ಶರ್ಮ ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದುಕೊಂಡಿದ್ದಾರೆ ಎಂದು ವರದಿ ಹೇಳಿದೆ
ಒಂದು ವೇಳೆ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದರೆ ಮುಂದಿನ ಏಷ್ಯಾ ಕಪ್ ಹಿನ್ನೆಲೆಯಲ್ಲಿ ರೋಹಿತ್ ಅವರಿಗೆ ವಿಶ್ರಾಂತಿ ನೀಡುವ ಎಲ್ಲ ಸಾಧ್ಯತೆಗಳಿವೆ.
ಇದನ್ನೂ ಓದಿ | INDvsENG ODI : ಅಫ್ರಿದಿ ದಾಖಲೆಯನ್ನೂ ಪುಡಿಗಟ್ಟಿದ ರೋಹಿತ್ ಶರ್ಮ