ಸಿಂಗಾಪುರ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಷಟ್ಲರ್ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ೯ನೇ rankನ ಆಟಗಾರ್ತಿ ಚೀನಾದ ಹಿ ಬಿಂಗ್ ಜಿಯೊ ವಿರುದ್ಧ ಗೆಲುವು ಸಾಧಿಸಿದ್ದು, ಕ್ವಾರ್ಟರ್ ಫೈನಲ್ಸ್‌ಗೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ.
ಎರಡು ಬಾರಿಯ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ಅವರು ಈ ಗೆಲುವಿನೊಂದಿಗೆ ಅದಾಗಲೇ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿರುವ ಪಿ.ವಿ ಸಿಂಧೂ ಹಾಗೂ ಎಚ್.ಎಸ್ ಪ್ರಣಯ್ ಅವರ ಸಾಲಿಗೆ ಸೇರ್ಪಡೆಗೊಂಡರು.ಕಳೆದ ಎರಡು ವರ್ಷಗಳಿಂದ ಪ್ರದರ್ಶನ ವೈಫಲ್ಯ ಎದುರಿಸುತ್ತಿರುವ ಅವರಿಗೆ ಲಭಿಸಿರುವ ಉತ್ತಮ ಗೆಲುವಾಗಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆಯಲ್ಲಿ ೨೧-೧೯, ೧೧-೨೧, ೨೧-೧೭ ಗೇಮ್‌ಗಳಿಂದ ಸಿಂಧೂ ಚೀನಾದ ಆಟಗಾರ್ತಿಯ ವಿರುದ್ಧ ಗೆಲುವು ಸಾಧಿಸಿದರು.
ಕಳೆದ ಹಲವು ತಿಂಗಳಿಂದ ಗಾಯದ ಸಮಸ್ಯೆ ಹಾಗೂ ಪ್ರದರ್ಶನ ವೈಫಲ್ಯದ ಕಾರಣಕ್ಕೆ ಸಿಂಧೂ ಭರ್ಜರಿ ಹಿನ್ನಡೆ ಅನುಭವಿಸಿದ್ದರು. ಕಾಮನ್ವೆಲ್ತ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲೂ ಪಾಲ್ಗೊಳ್ಳದ ಅವರು ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದರು.
ಸಿಂಧೂ, ಪ್ರಣಯ್ ಕ್ವಾರ್ಟರ್ ಫೈನಲ್ಸ್‌ಗೆ
ವಿಯೆಟ್ನಾಮ್‌ನ ವಿಶ್ವದ ೫೯ನೇ ಶ್ರೇಯಾಂಕದ ಆಟಗಾರ್ತಿ ಥು ಲಿನ್ ಎನ್‌ಗ್ವೆನ್ ವಿರುದ್ಧ ೧೯-೨೧, ೨೧-೧೯, ೨೧-೧೮ ಗೇಮ್‌ಗಳಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶ ಪಡೆದರು. ಅಂತೆಯೇ ವಿಶ್ವದ ೧೯ನೇ ಶ್ರೇಯಾಂಕದ ಪ್ರಯಣ್ ಎಚ್. ಎಸ್ ಪುರುಷರ ಸಿಂಗಲ್ಸ್‌ನಲ್ಲಿ ಚೈನೀಸ್ ತೈಪೆಯ ಚೊ ಟಿನ್ ಚೆನ್ ವಿರುದ್ಧ ೧೪-೨೧, ೨೨-೨೦, ೨೧-೧೮ ಗೇಮ್‌ಗಳಿಂದ ಗೆಲುವು ಸಾಧಿಸಿದರು.
ಇದನ್ನೂ ಓದಿ : Badminton : ತಪ್ಪೇ ಮಾಡದ ಸಿಂಧೂಗೆ ದಂಡ ಹಾಕಿ ಇದೀಗ ಕ್ಷಮೆ ಕೋರಿದ ತಾಂತ್ರಿಕ ಸಮಿತಿ