ಚಿತ್ತಗಾಂಗ್ : ಟೆಸ್ಟ್ ಸರಣಿಯ (INDvsBAN) ಮೊದಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡದ ಆರಂಭಿಕ ಬ್ಯಾಟರ್ಗಳು ಭಾರತದ ಬೌಲರ್ಗಳನ್ನು ನಿರಂತರವಾಗಿ ಕಾಡಿದರು. ನಜ್ಮುಲ್ ಹೊಸೈನ್ (67) ಹಾಗೂ ಜಾಕಿರ್ ಹಸನ್ (100) ಮೊದಲ ವಿಕೆಟ್ಗೆ 124 ರನ್ಗಳ ಜತೆಯಾಟ ಆಡಿದರು. 513 ರನ್ಗಳ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಈ ಜೋಡಿ ತೋರಿದ ಸಾಹಸ ಭಾರತದ ಪಾಳಯವನ್ನು ಚಿಂತೆಗೀಡು ಮಾಡಿತ್ತು. ಇವೆಲ್ಲದರ ನಡುವೆ ನಜ್ಮುಲ್ ಹೊಸೈನ್ ಅವರ ಸುಲಭ ಕ್ಯಾಚೊಂದನ್ನು ವಿರಾಟ್ ಕೊಹ್ಲಿ ನೆಲಕ್ಕೆ ಚೆಲ್ಲಿ ಟೀಕೆಗೆ ಒಳಗಾಗುತ್ತಿದ್ದರು. ಅದನ್ನು ವಿಕೆಟ್ ಕೀಪರ್ ರಿಷಭ್ ಪಂತ್ ತಪ್ಪಿಸಿದ ಪ್ರಸಂಗ ನಡೆಯಿತು.
ಇನಿಂಗ್ಸ್ನ 47ನೇ ಓವರ್ ಎಸೆದ ಉಮೇಶ್ ಯಾದವ್ ಅವರ ಎಸೆತವನ್ನು ಎಡಗೈ ಬ್ಯಾಟರ್ ನಜ್ಮುಲ್ ಫಸ್ಟ್ ಸ್ಲಿಪ್ ಕಡೆಗೆ ಕಳುಹಿಸಿದರು. ಅಲ್ಲಿದ್ದ ವಿರಾಟ್ ಕೊಹ್ಲಿ ಅದನ್ನು ಹಿಡಿಯವ ಪ್ರಯತ್ನ ಮಾಡಿದರೂ ಅವರ ಕೈಗೆ ಬಡಿದು ದೂರ ಹೋಯಿತು. ವಿಕೆಟ್ ಕೀಪರ್ ರಿಷಬ್ ಪಂತ್ ತಕ್ಷಣ ಅದನ್ನು ಹಿಡಿಯುವ ಯತ್ನ ಮಾಡಿದರೂ ಅದರು ಅವರ ಕೈಗೆ ತಾಗಿ ಕೆಳಕ್ಕೆ ಬೀಳುತ್ತಿತ್ತು. ತಕ್ಷಣ ಅವರು ಇನ್ನೊಂದು ಕೈಯಲ್ಲಿ ಚೆಂಡು ಹಿಡಿದು ಭಾರತಕ್ಕೆ ಯಶಸ್ಸು ಸಿಗವಂತೆ ನೋಡಿಕೊಂಡರು.
ಈ ಒಂದು ವಿಕೆಟ್ ಸಿಗುತ್ತಿದ್ದಂತೆ ಭಾರತ ತಂಡದ ನಾಯಕ ಕೆ. ಎಲ್ ನಿರಾಳರಾದರು. ತಕ್ಷಣ ಅವರು ರಿಷಭ್ ಪಂತ್ಗೆ ಕೈ ಮುಗಿಯುವ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರು. ವಿರಾಟ್ ಕೊಹ್ಲಿಯೂ ಕ್ಯಾಚ್ ಹಿಡಿದು ಮಾನ ಕಾಪಾಡಿದ ರಿಷಭ್ಗೆ ಥ್ಯಾಂಕ್ಸ್ ಹೇಳಿದರು.
ಇದನ್ನೂ ಓದಿ | Cristiano Ronaldo | ಸೋಲಿನ ಸುಳಿಗೆ ಸಿಲುಕಿ ರೊನಾಲ್ಡೊಗೆ ಸಮಾಧಾನ ಹೇಳಿದ ವಿರಾಟ್ ಕೊಹ್ಲಿ