ವಿಸ್ತಾರ ನ್ಯೂಸ್ (vistaranews.com)ನಿಂದ Vistara News Kannada (ವಿಸ್ತಾರ ನ್ಯೂಸ್ ಕನ್ನಡ) ಹೊಸ ಆ್ಯಪ್ ಬಿಡುಗಡೆಯಾಗಿದ್ದು, ಈಗಾಗಲೇ ನೀವು ಹೊಂದಿರುವ ಹಳೆಯ ಆ್ಯಪ್ ಡಿಲೀಟ್ ಮಾಡಿ ಹೊಸ ಆ್ಯಪ್ ಡೌನ್ ಮಾಡಿಕೊಳ್ಳಿ. ಹೀಗೆ ಮಾಡಿದಾಗ ನಿಮಗೆ 2 ಸಾವಿರ ರೂ. ಮೌಲ್ಯದ ಕೂಪನ್ ದೊರೆಯುತ್ತದೆ!
ನೀವು Vistara News Kannada ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ರಿಜಿಸ್ಟರ್ ಮಾಡಿಕೊಳ್ಳುತ್ತಿದ್ದಂತೆ 2000 ರೂಪಾಯಿ ಬೆಲೆಯ ಕೂಪನ್ ಸಿಗುತ್ತದೆ.
ಆ್ಯಪ್ ಡೌನ್‌ಲೋಡ್ ಮಾಡಿ, ಕೂಪನ್ ಪಡೆಯೋದು ಹೇಗೆ?
2000 ರೂ. ಕೂಪನ್ ಪ್ರಾಯೋಜಕರು ಪ್ರಸಿದ್ಧ ಮ್ಯಾಟ್ರೆಸ್ ಕಂಪನಿಯಾದ ರಿಪೋಸ್ (Repose) ಮತ್ತು ಗೃಹ ಬಳಕೆ ವಸ್ತುಗಳ ವ್ಯಾಪಾರ ಸಂಸ್ಥೆಯಾದ ಗಿರಿಯಾಸ್ (Girias). ನೀವು ವಿಸ್ತಾರ ನ್ಯೂಸ್ ಕನ್ನಡ ಆ್ಯಪ್ನ್ನು ಗೂಗಲ್ ಪ್ಲೇಸ್ಟೋರ್(Google Play Store)ನಿಂದಲೂ, ಆ್ಯಪ್ ಸ್ಟೋರ್ನಿಂದಲೂ ಡೌನ್ ಲೋಡ್ ಮಾಡಿಕೊಳ್ಳಬಹುದು
ಗೂಗಲ್ ಪ್ಲೇಸ್ಟೋರ್ನಿಂದ Vistara News Kannada ಆ್ಯಪ್ ಡೌನ್‌ಲೋಡ್ ಮಾಡಲು ಲಿಂಕ್: https://play.google.com/store/apps/details?id=appvistaranewscom.wpapp
ಆ್ಯಪಲ್ ಐಫೋನ್ ಬಳಕೆದಾರರು ಆ್ಯಪ್ ಸ್ಟೋರ್ನಿಂದ Vistara News Kannada ಆ್ಯಪ್ ಡೌನ್‌ಲೋಡ್ ಮಾಡಲು ಲಿಂಕ್ : https://apps.apple.com/in/app/vistara-news-kannada/id1664332223
ಆ್ಯಪ್ ಡೌನ್‌ಲೋಡ್ ಮಾಡುವ ವಿಧಾನ ತುಂಬ ಸರಳವಾಗಿದೆ. ಆ್ಯಂಡ್ರಾಯ್ಡ್ ಬಳಕೆದಾರರು ನೀವಾಗಿದ್ದರೆ, ಗೂಗಲ್ ಪ್ಲೇಸ್ಟೋರ್(Play Store)ಗೆ ಹೋಗಿ. ಹಾಗೇ, ಆ್ಯಪಲ್ ಐಫೋನ್, ಐಪ್ಯಾಡ್ ಬಳಸುತ್ತಿದ್ದರೆ ಆ್ಯಪ್ ಸ್ಟೋರ್ (APP Store)ಗೆ ಭೇಟಿ ಕೊಡಿ. ಹೀಗೆ ಪ್ಲೇಸ್ಟೋರ್/ಪ್ಲೇಸ್ಟೋರ್ಗೆ ಭೇಟಿಕೊಟ್ಟ ಬಳಿಕ ಅಲ್ಲಿ ‘Vistara News Kannada’ ಎಂದು ಸರ್ಚ್ ಕೊಟ್ಟರೆ, ನಿಮಗೆ ವಿಸ್ತಾರ ನ್ಯೂಸ್ನ ಆ್ಯಪ್ ಕಾಣಿಸಿಕೊಳ್ಳುತ್ತದೆ. ನೀವಲ್ಲಿ ಇನ್ಸ್ಟಾಲ್ (Install) ಎಂಬಲ್ಲಿ ಕ್ಲಿಕ್ ಮಾಡಿದರೆ, ಕ್ಷಣದಲ್ಲಿ ಆ್ಯಪ್ ಡೌನ್‌ಲೋಡ್ ಆಗುತ್ತದೆ.
ವಿಸ್ತಾರ್ ನ್ಯೂಸ್ನಿಂದ, ಗಿರಿಯಾಸ್ ಮತ್ತು ರಿಪೋಸ್ ಪ್ರಾಯೋಜಕತ್ವದಲ್ಲಿ ಕೊಡುತ್ತಿರುವ ತಲಾ 1000 ರೂಪಾಯಿ ಬೆಲೆಯ (ಒಟ್ಟು 2000 ರೂ.ಬೆಲೆಯ) ಕೂಪನ್ ನೀವು ಪಡೆಯಬೇಕು ಎಂದರೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ರಿಜಿಸ್ಟರ್ ಮಾಡಿಕೊಳ್ಳಬೇಕು. ಡೌನ್‌ಲೋಡ್ ಆದ ಆ್ಯಪ್ ಓಪನ್ ಮಾಡಿದಾಗ ನಿಮಗೆ ಕೆಳಭಾಗದಲ್ಲಿ ‘ರಿಜಿಸ್ಟರ್’ ಎಂಬ ಕೆಟಗರಿ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದಾಗ ‘ಬಳಕೆದಾರರ ನೋಂದಣಿ’ ಎಂಬ ವಿಭಾಗದಡಿ ನಿಮ್ಮ ಹೆಸರು, ವಯಸ್ಸು, ಲಿಂಗ, ರೆಫರಲ್ ಕೋಡ್, ನೀವು ವಾಸವಾಗಿರುವ ನಗರ, ನಿಮ್ಮ ಮೊಬೈಲ್ ನಂಬರ್, ಇಮೇಲ್ ವಿಳಾಸವನ್ನು ನಮೂದಿಸಬೇಕು ಮತ್ತು ನಮ್ಮ ಆ್ಯಪ್ನ ಪ್ರೈವಸಿಗೆ ಸಂಬಂಧಪಟ್ಟ ನಿಯಮಗಳು/ಷರತ್ತುಗಳನ್ನು ಒಪ್ಪಿದ್ದೇವೆ ಎಂದು ಮಾರ್ಕ್ ಮಾಡಬೇಕು. ಬಳಿಕ ‘ರಿಜಿಸ್ಟರ್’ ಎಂದು ಬರೆದಿರುವ ನೀಲಿ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ನೋಂದಣಿ ಆಗುತ್ತದೆ.
ನಿಮಗೊಂದು ಮೇಲ್ ಬರುತ್ತದೆ
ವಿಸ್ತಾರ ನ್ಯೂಸ್ ಕನ್ನಡ ಆ್ಯಪ್ ಡೌನ್‌ಲೋಡ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳುತ್ತಿದ್ದಂತೆ ನೀವು ಕೊಟ್ಟ ಇಮೇಲ್ ವಿಳಾಸಕ್ಕೆ ಒಂದು ಇಮೇಲ್ ಸಂದೇಶ ಬರುತ್ತದೆ. ಅದರಲ್ಲಿ ಗಿರಿಯಾಸ್ ಮತ್ತು ರಿಪೋಸ್ ಕಂಪನಿಗಳ ತಲಾ 1000 ರೂಪಾಯಿ ಬೆಲೆಯ ಕೂಪನ್ ಇರುತ್ತದೆ ಮತ್ತು ಕೋಡ್ ಕೂಡ ಕೊಟ್ಟಿರಲಾಗುತ್ತದೆ. ನೀವು ಆಯಾ ಕಂಪನಿಗಳ ಕೂಪನ್ನ್ನು ಆಯಾ ಮಳಿಗೆಗಳಿಗೆ ತೆಗೆದುಕೊಂಡು ಹೋಗಿ ತೋರಿಸಿ. ರಿಪೋಸ್/ಗಿರಿಯಾಸ್ಗಳು ನೀವು ಕೊಳ್ಳುವ ವಸ್ತುಗಳ ಒಟ್ಟಾರೆ ಬೆಲೆಯಲ್ಲಿ ತಲಾ 1000 ರೂಪಾಯಿಯನ್ನು ಕಡಿತಗೊಳಿಸುತ್ತವೆ.
ವಿಸ್ತಾರ ನ್ಯೂಸ್ ವೆಬ್ಸೈಟ್ನ ಫೇಸ್ಬುಕ್ ಪೇಜ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ: https://www.facebook.com/vistaranewsspecial
ಆ್ಯಪ್ ಗಾತ್ರ ಕೇವಲ 1 MB, ಸುದ್ದಿಗಳ ವ್ಯಾಪ್ತಿ ಮಾತ್ರ ದೊಡ್ಡದು!
ವಿಸ್ತಾರ ನ್ಯೂಸ್ನಿಂದ ಹೊರತರಲಾದ ಆ್ಯಪ್ ಗಾತ್ರ ತುಂಬ ಚಿಕ್ಕದು, ಅಂದರೆ ಕೇವಲ 1 MB ಗಾತ್ರದ್ದಾಗಿದ್ದು, ಮೊಬೈಲ್ನಲ್ಲಿ ತೀರ ಕಡಿಮೆ ಸ್ಥಳಾವಕಾಶ ಸಾಕು. ಭಾರತದಲ್ಲಿ ಯಾವುದೇ ನ್ಯೂಸ್ ಚಾನೆಲ್ನ ಆ್ಯಪ್ ಇಷ್ಟು ಕಡಿಮೆ, ಅಂದರೆ ಕೇವಲ 1 MB (MegaByte) ಗಾತ್ರದಲ್ಲಿ ಲಭ್ಯವಿಲ್ಲ!
ಆ್ಯಪ್ ಗಾತ್ರ ಚಿಕ್ಕದಿದ್ದರೂ ಇಲ್ಲಿ ಸುದ್ದಿ/ಲೇಖನ/ಬರಹಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ರಾಜ್ಯ/ದೇಶ/ವಿದೇಶ/ ಕ್ರೀಡೆ/ಮನರಂಜನೆ/ರಾಜಕೀಯ ಇನ್ನಿತ್ಯಾದಿ ಕ್ಷೇತ್ರಗಳ ಪ್ರತಿದಿನದ ಸುದ್ದಿಗಳ ಜತೆಗೆ, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ವೈರಲ್ ಸುದ್ದಿಗಳು, ವಿಡಿಯೊಗಳು, ಉದ್ಯೋಗ/ಶಿಕ್ಷಣ/ತಂತ್ರಜ್ಞಾನದ ಮಾಹಿತಿಗಳು, ಖ್ಯಾತನಾಮರು ಬರೆಯುವ ವಿಶೇಷ ಬರಹಗಳು, ಎಕ್ಸ್ಪ್ಲೇನರ್ಗಳು, ಧಾರ್ಮಿಕ, ಭವಿಷ್ಯ ಕೆಟಗರಿಗಳು ಇವೆ. ಹಾಗೇ ಆರೋಗ್ಯ/ಸೌಂದರ್ಯ/ಫ್ಯಾಷನ್ಗೆ ಸಂಬಂಧಪಟ್ಟ ಉಪಯುಕ್ತ ಮಾಹಿತಿಗಳೂ ಲಭ್ಯವಿರುತ್ತವೆ.
ವಿಸ್ತಾರ ನ್ಯೂಸ್ ಯೂಟ್ಯೂಬ್ ಲಿಂಕ್: https://www.youtube.com/@VistaraNews