ಭಾರತದಲ್ಲಿ ಯೋಗಾಭ್ಯಾಸ (Yoga Day 2023) ಪುರಾತನ ಕಾಲದಿಂದಲೂ ಇದೆ. ಋಷಿ-ಮುನಿಗಳ ಕಾಲದಿಂದಲೂ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿಗಾಗಿ ಈ ಯೋಗಾಭ್ಯಾಸವನ್ನು ಮಾಡಿಕೊಂಡೇ ಬರಲಾಗಿದೆ. ನಿಯಮಿತವಾಗಿ ಯೋಗ ಮಾಡುವ ಅನೇಕ ಭಾರತೀಯ ಸೆಲೆಬ್ರಿಟಿಗಳು ನಮ್ಮ ಮುಂದೆ ಇದ್ದಾರೆ. ಬಾಲಿವುಡ್ ಹಾಗೂ ಹಾಲಿವುಡ್ ಸೆಲೆಬ್ರಿಟಿಗಳು ಯೋಗಾಭಾಸ್ಯದ ರೂಢಿ ಬೆಳೆಸಿಕೊಂಡಿದ್ದಾರೆ. ನಟಿಯರಾದ ಶಿಲ್ಪಾ ಶೆಟ್ಟಿ ಮತ್ತು ಮಲೈಕಾ ಅರೋರಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಯೋಗಾಭ್ಯಾಸದ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಬಾಲಿವುಡ್ ನಟಿ ಮತ್ತು ಉದ್ಯಮಿ, ಸುಮಾರು ಎರಡು ದಶಕಗಳಿಂದ ಯೋಗವನ್ನು ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುತ್ತಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಯೋಗದ ಕುರಿತು ಹಲವಾರು ಆಡಿಯೊ-ವಿಡಿಯೊಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ನಟಿ ವಿವಿಧ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಹಲವಾರು ಬಾರಿ ಮಾಡಿ ತೋರಿಸಿದ್ದಾರೆ. ಬಾಬಾ ರಾಮದೇವ್ ಅವರೊಂದಿಗೆ ಯೋಗ ಮಾಡಿರುವುದು ಈಗಲೂ ಅತ್ಯಂತ ಜನಪ್ರಿಯವಾಗಿವೆ.
ಕರೀನಾ ಕಪೂರ್ ಖಾನ್
ಕರೀನಾ ಕಪೂರ್ ಖಾನ್ ಕೂಡ ನಿಯಮಿತವಾಗಿ ಯೋಗ ಮಾಡುತ್ತಾರೆ. ಆಗಾಗ ಯೋಗದ ಭಂಗಿಗಳನ್ನು ಅಭ್ಯಾಸ ಮಾಡುವ ಫೋಟೊಗಳು ಮತ್ತು ವಿಡಿಯೊಗಳನ್ನು ಇನ್ಸ್ಟಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. 2006ರಲ್ಲಿಯೇ ನಟಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಈಗಲೂ ಯೋಗಾಭ್ಯಾಸ ಮುಂದುವರಿಸಿದ್ದಾರೆ. ಕರೀನಾ ಇತ್ತೀಚೆಗೆ ಪೋಸ್ಟ್ನಲ್ಲಿ ತಮ್ಮ ಯೋಗದ ಹಾದಿಯ ಬಗ್ಗೆ ಹೇಳಿಕೊಂಡಿದ್ದರು. ಯೋಗಾಸನಗಳು ತಮಗೆ ಹಲವಾರು ವರ್ಷಗಳಿಂದ ಫಿಟ್ ಮತ್ತು ಸ್ಟ್ರಾಂಗ್ ಆಗಿರಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.
ಮಲೈಕಾ ಅರೋರಾ
ಮಲೈಕಾ ಅರೋರಾ ಫ್ಯಾಷನ್ ಅಷ್ಟೇ ಅಲ್ಲ, ಫಿಟ್ನೆಸ್ನಲ್ಲೂ ಪ್ರಭಾವಿಯಾಗಿದ್ದಾರೆ. ಪಾಪರಾಜಿಗಳು (ಫೋಟೊಗ್ರಾಫರ್ಗಳು) ಆಗಾಗ ಈ ನಟಿ ಜಿಮ್ನ ಹೊರಗೆ, ಸ್ಟುಡಿಯೋದಲ್ಲಿ ಅಥವಾ ಜಿಮ್ ಉಡುಪಿನಲ್ಲಿ ಇದ್ದಾಗ ಫೋಟೊ ಸೆರೆ ಹಿಡಿಯಲು ಪರದಾಡುತ್ತಲೇ ಇರುತ್ತಾರೆ. ಮಲೈಕಾ ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳಲ್ಲಿ ವಿವಿಧ ಯೋಗ ಭಂಗಿಗಳನ್ನು ಅಭ್ಯಾಸ ಮಾಡುವ ಫೋಟೊಗಳು ಮತ್ತು ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಮಿಲಿಂದ್ ಸೋಮನ್
ಮಿಲಿಂದ್ ಸೋಮನ್ ಭಾರತದ ಫಿಟೆಸ್ಟ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ನಟ-ಮಾಡೆಲ್ ಮ್ಯಾರಥಾನ್ಗಳಲ್ಲಿ, ಇತರ ಅಥ್ಲೆಟಿಕ್ ಕ್ರೀಡೆಗಳಲ್ಲಿ ಭಾಗವಹಿಸಲು ಹೆಸರುವಾಸಿಯಾಗಿದ್ದಾರೆ. ಅವರ ಫಿಟ್ನೆಸ್ನಲ್ಲಿ ಯೋಗ ಕೂಡ ಒಂದು. 56 ವರ್ಷ ವಯಸ್ಸಾಗಿದ್ದರೂ ಯೋಗದಲ್ಲಿ ಇವರು ಸಖತ್ ಆ್ಯಕ್ಟಿವ್.
ಬಿಪಾಶಾ ಬಸು
ಬಿಪಾಶಾ ಬಸು ಯೋಗಾಭ್ಯಾಸದಿಂದ ಹಿಡಿದು ರೆಸಿಸ್ಟೆನ್ಸ್ ಬ್ಯಾಂಡ್ಗಳು ಮತ್ತು ಸ್ಟ್ರೆಚಿಂಗ್ನೊಂದಿಗೆ ಮನೆಯಲ್ಲಿ ವರ್ಕೌಟ್ಗಳನ್ನು ಮಾಡುತ್ತಾರೆ. ಈ ಬಾಲಿವುಡ್ ತಾರೆ ಫಿಟ್ನೆಸ್ ಉತ್ಸಾಹಿ.
ಇಷ್ಟಲ್ಲದೇ, ಅಕ್ಷಯ್ ಕುಮಾರ್, ಲಾರಾ ದತ್ತಾ ಮತ್ತು ಸೋನಾಕ್ಷಿ ಸಿನ್ಹಾ ಕೂಡ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಮತ್ತು ಶಿಖರ್ ಧವನ್ ಅವರಂತಹ ಕ್ರಿಕೆಟಿಗರು ಸಹ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಈ ರೀತಿಯ ವ್ಯಾಯಾಮದ ಲಾಭವನ್ನು ಪಡೆಯುತ್ತಿದ್ದಾರೆ.
ಗ್ವಿನೆತ್ ಪಾಲ್ಟ್ರೋ (Gwyneth Paltrow)
ಗ್ವಿನೆತ್ ಪಾಲ್ಟ್ರೋ ಅವರು ನಿತ್ಯ ಬೆಳಿಗ್ಗೆ 4.30ಕ್ಕೆ ಎದ್ದು ಯೋಗವನ್ನು ಅಭ್ಯಾಸ ಮಾಡುತ್ತಾರೆ. ನಟಿ, ಗಾಯಕಿ, ಬರಹಗಾರ್ತಿ ಮತ್ತು ತಾಯಿಯೂ ಆಗಿರುವ ಇವರು ಯೋಗವನ್ನು ಮಿಸ್ ಮಾಡುವುದೇ ಇಲ್ಲ. ಒತ್ತಡವನ್ನು ಕಡಿಮೆ ಮಾಡಲು ಮತ್ತು ತಮ್ಮ ದೇಹವನ್ನು ಶೇಪ್ನಲ್ಲಿ ಇಟ್ಟುಕೊಳ್ಳಲು ಯೋಗಾಭ್ಯಾಸ ಉಪಯುಕ್ತ ಎನ್ನುತ್ತಾರವರು.
ಇದನ್ನೂ ಓದಿ: Yoga Day 2023 : ಭ್ರಾಂತ ಮನಸ್ಸನ್ನು ಶಾಂತ ಸ್ಥಿತಿಗೆ ತರುವ ಪ್ರಾಣಾಯಾಮ, ನೀವೂ ಮಾಡಿ…
ಜೆನ್ನಿಫರ್ ಅನಿಸ್ಟನ್ (Jennifer Aniston)
ಜೆನ್ನಿಫರ್ ಅನಿಸ್ಟನ್ ಯೋಗ ಮತ್ತು ಸ್ಪಿನ್ ತರಗತಿಗಳೊಂದಿಗೆ ತಮ್ಮ ದಿನವನ್ನು ಶುರು ಮಾಡುತ್ತಾರೆ. ಇದರಿಂದ ಮಾನಸಿಕ ಆರೋಗ್ಯ ಹಾಗೂ ಪಾಸಿಟಿವಿಟಿ ವೃದ್ಧಿಸುತ್ತದೆ ಎನ್ನುತ್ತಾರೆ. ಯೋಗ ತಮಗೆ ಹೆಚ್ಚು ಆತ್ಮವಿಶ್ವಾಸ, ಶಾಂತತೆ, ಸಬಲತೆಯನ್ನು ನೀಡಿದೆ ಎಂದು ಅವರು ಹೇಳುತ್ತಾರೆ.
ಟಾಮ್ ಹ್ಯಾಂಕ್ಸ್
ಖ್ಯಾತ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಇತ್ತೀಚೆಗಷ್ಟೇ ಯೋಗಾಭ್ಯಾಸವನ್ನು ಶುರು ಮಾಡಿಕೊಂಡಿದ್ದಾರೆ. ದೇಹದಲ್ಲಿ ಏನಾದರೂ ನೋವಿದ್ದರೆ ಯೋಗದಿಂದ ಬಹಳ ಪರಿಣಾಮಕಾರಿ ಎನ್ನುತ್ತಾರವರು.
ಜೆಸ್ಸಿಕಾ ಬೀಲ್
ಯೋಗ ತಮ್ಮ ಜೀವನವನ್ನು ಹೇಗೆ ಬದಲಾಯಿಸಿದೆ ಎಂಬುದರ ಕುರಿತು ಜೆಸ್ಸಿಕಾ ಬೀಲ್ ಬಹಿರಂಗವಾಗಿ ಮಾತನಾಡಿದ್ದಾರೆ. ಏಕಾಗ್ರತೆಯನ್ನು ಕಂಡುಕೊಳ್ಳಲು ಯೋಗಾಭ್ಯಾಸ ಸಹಾಯ ಮಾಡಿತು ಎಂದಿದ್ದಾರೆ. ಪ್ರತಿದಿನ ಕನಿಷ್ಠ ಅರ್ಧ ಗಂಟೆಯವರೆಗೆ ಯೋಗವನ್ನು ಅಭ್ಯಾಸ ಮಾಡುತ್ತೇನೆ. ಒತ್ತಡ ಮುಕ್ತವಾಗಿ ಮತ್ತು ಶಾಂತವಾಗಿ ಇರಲು ಯೋಗ ತುಂಬ ಸಹಾಯಕ ಎಂಬ ಅಭಿಮತ ಅವರದು.
ರಸ್ಸೆಲ್ ಬ್ರಾಂಡ್
ಯೋಗ ತಮ್ಮ ಜೀವನವನ್ನು ಬದಲಾಯಿಸಿದೆ ಎಂದು ರಸ್ಸೆಲ್ ಬ್ರಾಂಡ್ ಹೇಳಿದ್ದಾರೆ. ಅವರು ಸ್ವಂತ ಯೋಗ ಸ್ಟುಡಿಯೊವನ್ನು ಹೊಂದಿದ್ದಾರೆ.