Site icon Vistara News

ಇಂಗ್ಲೆಂಡ್ ಕ್ರಿಕೆಟರ್‌ಗಳಾದ ಸ್ಟುವರ್ಟ್‌ ಬ್ರಾಡ್, ಗರ್ನಿ ಮಾಲೀಕತ್ವದ ಪಬ್‌ ಬೆಂಕಿಗಾಹುತಿ

stuart broad pub

ಬ್ರಾಟನ್‌: ಇಂಗ್ಲೆಂಡ್‌ನ ಕ್ರಿಕೆಟರ್‌ಗಳಾದ ಸ್ಟುವರ್ಟ್‌ ಬ್ರಾಡ್‌ ಮತ್ತು ಹ್ಯಾರಿ ಗರ್ನಿ ಅವರಿಗೆ ಸೇರಿದ ಅಪ್ಪರ್‌ ಬ್ರಾಟನ್‌ ಗ್ರಾಮದಲ್ಲಿರುವ ಪಬ್‌ ಒಂದು ಜೂನ್‌ 11ರಂದು ಬೆಳಗ್ಗೆ ಬೆಂಕಿಗೆ ಆಹುತಿಯಾಗಿದೆ. ಶನಿವಾರ ಮುಂಜಾನೆ 3.20ರ ಹೊತ್ತಿಗೆ ಈ ಘಟನೆ ನಡೆದಿದ್ದು, ಎಂಟು ಅಗ್ನಿಶಾಮಕ ದಳದ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ.
ಘಟನೆಯಿಂದ ಪಬ್‌ನ ಚಾವಣಿ ಮತ್ತು ನೆಲ ಭಾಗದಲ್ಲಿ ಭಾರಿ ಹಾನಿಯುಂಟಾಗಿದೆ. ಅದರೆ, ಯಾವುದೇ ಜೀವ ಹಾನಿಯಾಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಬ್ರಾಡ್‌ ಕ್ರೀಡಾಂಗಣಕ್ಕೆ ಹೊರಟಿದ್ದರು
ಈ ಘಟನೆ ನಡೆದಾಗ ಸ್ಟುವರ್ಟ್‌ ಬ್ರಾಡ್‌ ಅವರು ಕ್ರಿಕೆಟ್‌ ಅಂಗಣಕ್ಕೆ ಹೊರಡಲು ಸಿದ್ಧವಾಗುತ್ತಿದ್ದರು. ಅವರು ಇಂಗ್ಲೆಂಡ್‌ ಟೆಸ್ಟ್‌ ತಂಡದ ಪ್ರಧಾನ ಬೌಲರ್‌ಗಳಲ್ಲಿ ಒಬ್ಬರು. ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ನಾಟಿಂಗ್‌ ಹ್ಯಾಮ್‌ನ ಟ್ರೆಂಟ್‌ ಬ್ರಿಜ್‌ನಲ್ಲಿ ಎರಡನೇ ಟೆಸ್ಟ್‌ ನಡೆಯುತ್ತಿದೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಜತೆಗೆ ಸಕಾಲದಲ್ಲಿ ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗದಂತೆ ತಡೆದ ಅಧಿಕಾರಿಗಳ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಟುವರ್ಟ್‌ ಬ್ರಾಡ್‌ ಭಾರತದಲ್ಲೂ ಚಿರಪರಿಚಿತರಾಗಿದ್ದಾರೆ. 14 ವರ್ಷದ ಹಿಂದೆ ಟಿ 20 ವಿಶ್ವ ಕಪ್‌ ಪಂದ್ಯಾವಳಿಯಲ್ಲಿ ಯುವರಾಜ್‌ ಸಿಂಗ್‌ ಅವರು ಸ್ಟುವರ್ಟ್‌ ಬ್ರಾಡ್‌ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದನ್ನೂ ಓದಿ| ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ

Exit mobile version