ಮುಂಬಯಿ: ಭಾರತ ತಂಡದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಟಿ೨೦ ಮಾದರಿಯ power play ಅವಧಿಯಲ್ಲಿ ಒಟ್ಟಾರೆ ೩೪ ವಿಕೆಟ್‌ಗಳನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.
ಐರ್ಲೆಂಡ್ ವಿರುದ್ಧ ಭಾನುವಾರ ನಡೆದ ಮೊದಲ ಟಿ೨೦ ಪಂದ್ಯದ ವೇಳೆ ಅವರು ಈ ನೂತನ ದಾಖಲೆ ಸೃಷ್ಟಿಸಿದ್ದಾರೆ. ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಲ್ಬಿರಿನ್ ಅವರ ವಿಕೆಟ್ ಪಡೆಯುವ ಮೂಲಕ ಭುವಿ ನೂತನ ದಾಖಲೆ ಸೃಷ್ಟಿಸಿದ್ದಾರೆ. ಈ ದಾಖಲೆ ವೆಸ್ಟ್ ಇಂಡೀಸ್‌ನ ಸ್ಯಾಮುವೆಲ್ ಬದ್ರಿ ಹಾಗೂ ನ್ಯೂಜಿಲೆಂಡ್‌ನ ವೇಗಿ ಟಿಮ್ ಸೌಥಿ (೩೩ ) ಹೆಸರಿನಲ್ಲಿತ್ತು.
ಭುವಿ ಭರ್ಜರಿ ಬೌಲಿಂಗ್: ಭಾನುವಾರ ನಡೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು. ಒಟ್ಟಾರೆ ೩ ಓವರ್‌ಗಳನ್ನು ಎಸೆದ ಅವರು ೧೬ ರನ್‌ಗಳನ್ನು ನೀಡಿ ೧ ವಿಕೆಟ್ ಕಬಳಿಸಿದ್ದರು. ಐರ್ಲೆಂಡ್ ನಾಯಕ ಆ್ಯಂಡಿ ಬಲ್ಬಿರಿನ್ (೦) ಅವರ ವಿಕೆಟ್ ಪಡೆಯುವ ಮೂಲಕ ಆರಂಭದಲ್ಲೇ ಆತಿಥೇಯ ತಂಡಕ್ಕೆ ಆಘಾತ ನೀಡಿದ್ದರು. ಅವರ ಬೌಲಿಂಗ್ ಪ್ರದರ್ಶದಿಂದಾಗಿ ಭಾರತಕ್ಕೆ ಉತ್ತಮ ಆರಂಭ ದೊರೆಯಿತಲ್ಲದೆ, ಮಳೆಯಿಂದ ೧೨ ಓವರ್‌ಗಳಿಗೆ ಸೀಮಿತಗೊಳಿಸಲಾಗಿದ್ದ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ೧೦೮ ರನ್ ಬಿಟ್ಟುಕೊಟ್ಟಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ ದೀಪಕ್ ಹೂಡಾ (೨೯ ಎಸೆತಕ್ಕೆ ೪೭ ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: IND-IRE T20 | ಹೂಡ-ಹಾರ್ದಿಕ್ ಬ್ಯಾಟಿಂಗ್ ಅಬ್ಬರ, ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತಕ್ಕೆ ಗೆಲುವು