Site icon Vistara News

Dasara 2022 | ದೇವರಹಿಪ್ಪರಗಿಯಲ್ಲಿ ನವರಾತ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ

ವಿಜಯಪುರ

ವಿಜಯಪುರ (ದೇವರ ಹಿಪ್ಪರಗಿ): ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ದಸರಾ ಸಂಭ್ರಮ (Dasara 2022) ಕಳೆಕಟ್ಟಿದ್ದು, ನಾಡದೇವಿ ಉತ್ಸವಕ್ಕೆ ಸಡಗರ ಮತ್ತು ಸಂಭ್ರಮದ ಚಾಲನೆ ದೊರೆತಿದೆ.

ಕೊರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಂಕಾಗಿದ್ದ ನಾಡದೇವಿ ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವರ ಹಿಪ್ಪರಗಿ ಪಟ್ಟಣದ ನಾಡದೇವಿ ಉತ್ಸವ ಕಮಿಟಿ ಹಮ್ಮಿಕೊಂಡ ದಸರಾ ಉತ್ಸವಕ್ಕೆ ಕಲಾತಂಡಗಳು ಮೆರಗು ತಂದವು.

ಜಿಲ್ಲೆಯ ಕಲಾತಂಡಗಳು ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವೀರಗಾಸೆ, ದೇವಿಕುಣಿತ, ಮಹಿಳಾ ಡೊಳ್ಳುಕುಣಿತ ನೆರೆಯ ಕೇರಳ ರಾಜ್ಯದ ಚಂಡೆವಾದ್ಯ, ಗೊಂಬೆ ಕುಣಿತ ಮತ್ತಿತರ ಕಲಾ ಪ್ರಕಾರಗಳು ಜನಮನ ಸೆಳೆದವು. ಪಟ್ಟಣದ ದಸರಾ ವೈಭವಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ಸಹಸ್ರಾರು ಜನ ಸಾಕ್ಷಿಯಾದರು. ನವರಾತ್ರಿ ಉತ್ಸವಕ್ಕೆ ಸೋಮವಾರದಿಂದ ಅಧಿಕೃತ ಚಾಲನೆ ದೊರೆತಿದ್ದು, ವಿಜಯದ ದಶಮಿಯವರೆಗೆ ದೇವಿಯ ಮೂರ್ತಿಗೆ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿವೆ.

ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version