Site icon Vistara News

ಚೆಂಡು ತಲೆಗೆ ಬಿದ್ದ ಬಾಲಕಿಗೆ England Team ಜರ್ಸಿ ಗಿಫ್ಟ್‌

england team

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ರೋಹಿತ್‌ ಶರ್ಮ ಬಾರಿಸಿದ ಸಿಕ್ಸರ್‌ ತಲೆಗೆ ಬಿದ್ದು ಗಾಯಗೊಂಡಿದ್ದ ಕ್ರಿಕೆಟ್‌ ಅಭಿಮಾನಿ ಬಾಲಕಿಗೆ England Team ಜರ್ಸಿ ಗಿಫ್ಟ್‌ ಸಿಕ್ಕಿದೆ.

ಇಂಗ್ಲೆಂಡ್‌ ತಂಡದ ಡೇವಿಡ್‌ ವಿಲ್ಲಿ ಎಸೆದ ಇನಿಂಗ್ಸ್‌ನ ೫ನೇ ಓವರ್‌ನಲ್ಲಿ ರೋಹಿತ್‌ ಶರ್ಮ ಸಿಕ್ಸರ್‌ ಬಾರಿಸಿದ್ದ. ಆ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮೀರಾ ಸಲ್ವಿ ಹೆಸರಿನ ಬಾಲಕಿಯ ತಲೆಗೆ ಬಿದ್ದಿತ್ತು. ಅವರು ಗಾಯಗೊಂಡಿರಬಹುದು ಎಂಬ ಅನುಮಾನದ ಮೇರೆಗೆ ಇಂಗ್ಲೆಂಡ್‌ ತಂಡದ ಫಿಸಿಯೊ ತಕ್ಷಣವೇ ಅಲ್ಲಿಗೆ ತೆರಳಿ ಆಕೆಯ ಆರೋಗ್ಯ ವಿಚಾರಿಸಿದ್ದರು. ಹೀಗಾಗಿ ಪಂದ್ಯಕ್ಕೆ ಸ್ವಲ್ಪ ಹೊತ್ತು ಅಡಚಣೆ ಉಂಟಾಗಿತ್ತು.

ಬಾಲಕಿಯ ತಂದೆಯ ಫೋನ್‌ ನಂಬರ್‌ ಪಡೆದುಕೊಂಡ ರೋಹಿತ್‌ ಶರ್ಮ ಮರುದಿನ ಬಾಲಕಿಯನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದರು. ಅಂತೆಯೇ ಇದೀಗ ಇಂಗ್ಲೆಂಡ್‌ ತಂಡ ಆಕೆಗೆ ಜರ್ಸಿಯನ್ನು ಉಡುಗೊರೆಯಾಗಿ ಕೊಟ್ಟಿದೆ.

ಇದನ್ನೂ ಓದಿ: INDvsENG ODI: ರೋಹಿತ್‌ ಶರ್ಮ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಬಾಲಕಿಗೆ ಸಮಾಧಾನ ಹೇಳಿದ್ದು ಯಾಕೆ?

Exit mobile version