Site icon Vistara News

Unofficial ODI | ಭಾರತ ಎ ತಂಡಕ್ಕೆ 4 ವಿಕೆಟ್‌ ಜಯ, ಸರಣಿ ಸಂಜು ಸ್ಯಾಮ್ಸನ್‌ ಬಳಗದ ಕೈವಶ

unofficial match

ಚೆನ್ನೈ : ಪ್ರವಾಸಿ ನ್ಯೂಜಿಲೆಂಡ್‌ ಎ ತಂಡದ ವಿರುದ್ಧದ ಅನಧಿಕೃತ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ಎ ತಂಡ ವಿಜಯ ಸಾಧಿಸಿದೆ. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತು. ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರು ಹ್ಯಾಟ್ರಿಕ್‌ ಸಾಧನೆ ಜತೆಗೆ ೪ ವಿಕೆಟ್‌ ಕಬಳಿಸಿದರು.

ಚೆನ್ನೈನ ಚಿದಂಬರಂ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡ ೪೭ ಓವರ್‌ಗಳಲ್ಲಿ ೨೧೯ ರನ್‌ಗಳಿಗೆ ಆಲ್‌ಔಟ್‌ ಆಯಿತು. ಗುರಿ ಬೆನ್ನಟ್ಟಿದ ಭಾರತ ಎ ತಂಡ ೩೪ ಓವರ್‌ಗಳಲ್ಲಿ ೬ ವಿಕೆಟ್‌ ಕಳೆದುಕೊಂಡು ೨೨೨ ರನ್‌ ಬಾರಿಸಿ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡದ ಪರ ಜೋ ಕಾರ್ಟರ್‌ ೭೧ ಹಾಗೂ ರಚಿನ್‌ ರವೀಂದ್ರ ೬೧ ರನ್‌ ಬಾರಿಸಿದರು. ಆದರೆ ಉಳಿದ ಬ್ಯಾಟರ್‌ಗಳು ವೈಫಲ್ಯ ಎದುರಿಸಿದರು. ಭಾರತ ಪರ ಕುಲ್ದೀಪ್‌ ಯಾದವ್‌ ೫೧ ರನ್‌ಗಳಿಗೆ ೪ ವಿಕೆಟ್‌ ಕಿತ್ತರೆ, ರಾಹುಲ್‌ ಚಾಹರ್‌ ೫೦ ರನ್‌ಗಳಿಗೆ ೨ ವಿಕೆಟ್ ಕಬಳಿಸಿದರು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಆರಂಭಿಕ ಬ್ಯಾಟರ್‌ ೭೭ ರನ್ ಬಾರಿಸಿದರೆ, ಸಂಜು ಸ್ಯಾಮ್ಸನ್‌ (೩೭), ಋತುರಾಜ್‌ ಗಾಯಕ್ವಾಡ್‌ (೩೦) ಗೆಲುವಿಗೆ ಕೊಡುಗೆ ಕೊಟ್ಟರು.

ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲೆಂಡ್‌ ಎ : ೪೭ ಓವರ್‌ಗಳಲ್ಲಿ ೨೧೯ (ಜೋ ಕಾರ್ಟರ್‌ ೭೨, ರಚಿನ್‌ ರವೀಂದ್ರ ೬೧; ಕುಲ್ದೀಪ್‌ ಯಾದವ್‌ ೫೧ಕ್ಕೆ೪).

ಭಾರತ ಎ : ೩೪ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೨೨ (ಪೃಥ್ವಿ ಶಾ ೭೭, ಸಂಜು ಸ್ಯಾಮ್ಸನ್‌ ೩೭, ಋತುರಾಜ್ ಗಾಯಕ್ವಾಡ್‌ ೩೦; ಲೋಗನ್‌ ವಾನ್‌ ಬೀಕ್‌ ೪೬ಕ್ಕೆ೩).

ಇದನ್ನೂ ಓದಿ | Team India | ನ್ಯೂಜಿಲೆಂಡ್ ಎ ತಂಡವನ್ನುಏಳು ವಿಕೆಟ್‌ಗಳಿಂದ ಮಣಿಸಿದ ಸಂಜು ಸ್ಯಾಮ್ಸನ್‌ ಬಳಗ

Exit mobile version