Site icon Vistara News

Modi in Bangalore live : ಮೋದಿ ಬಿಜೆಪಿ ನಾಯಕರನ್ನು ಹತ್ತಿರ ಸೇರಿಸಿಲ್ಲ ಯಾಕೆಂದರೆ… : ಬಿ.ಎಲ್‌ ಸಂತೋಷ್‌ ವಿವರಣೆ

Modi in ISRO

ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.

Krishna Bhat

ಮೋದಿ ಆಗಮನದ ವಿಚಾರದಲ್ಲಿ ರಾಜಕಾರಣ ಸಲ್ಲ ಎಂದ ಶಾಸಕ ಎಸ್‌.ಆರ್‌ ವಿಶ್ವನಾಥ್‌

ಇಸ್ರೋ ಸಾಧನೆಯನ್ನ ಮೆಚ್ಚಿ ಪ್ರಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದರಲ್ಲೂ ರಾಜಕಾರಣ ಮಾಡ್ತಿರೋದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕೋ ಕೆಲ್ಸ ಮಾಡ್ತಿರೋದು ಸರಿಯಲ್ಲ. ಇಂಥದ್ರಲ್ಲಿ ರಾಜಕಾರಣ ಮಾಡೋರ ಬಗ್ಗೆ ಏನೂ ಮಾತನಾಡೋಲ್ಲ. ನಮ್ಮವರೇ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲ್ಸ ಮಾಡ್ತಿದ್ದಾರೆ. ಬ್ರಿಟಿಷರ ವಿರುದ್ಧ ನಮವರೇ ಪಿತೂರಿ ಮಾಡಿದ್ರು. ಅದೇ ರೀತಿ ಇಂಥ ವಿಚಾರದಲ್ಲಿ ರಾಜಕಾರಣ ಮಾಡ್ತಿದ್ದಾರೆ ಎಂದಿದ್ದಾರೆ ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌

Krishna Bhat

ಪ್ರಧಾನಿ ಮೋದಿ ಅವರನ್ನು ನೋಡಲು ಕಾತರ. ಭಾರಿ ಸಂಖ್ಯೆಯಲ್ಲಿ ಸೇರಿದ ಜನ. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಹಿರಿಯ ಬಿಜೆಪಿ ನಾಯಕರಿಂದ ಸ್ವಾಗತಕ್ಕೆ ಸಿದ್ಧತೆ. ಚಿತ್ರದಲ್ಲಿ ತೇಜಸ್ವಿ ಸೂರ್ಯ ಅವರು ಜನರ ನಡುವೆ ನಿಂತಿರುವುದನ್ನು ಕಾಣಬಹುದು

Krishna Bhat

ಹೆಚ್ ಎಎಲ್ ಏರ್ಪೋರ್ಟ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

Exit mobile version