Site icon Vistara News

Modi in Bangalore live : ಮೋದಿ ಬಿಜೆಪಿ ನಾಯಕರನ್ನು ಹತ್ತಿರ ಸೇರಿಸಿಲ್ಲ ಯಾಕೆಂದರೆ… : ಬಿ.ಎಲ್‌ ಸಂತೋಷ್‌ ವಿವರಣೆ

Modi in ISRO

ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.

Krishna Bhat

ಚಂದ್ರ ಯಾನ 3ಯಲ್ಲಿ ಲ್ಯಾಂಡರ್‌ ಇಳಿದ ಜಾಗವನ್ನು ಇನ್ನು ಮುಂದೆ ಶಿವಶಕ್ತಿ ಪಾಯಿಂಟ್‌ ಎಂದು ಕರೆಯಲಾಗುತ್ತದೆ.

Krishna Bhat

ಚಂದ್ರಯಾನ್‌ 2 ಇಳಿದು ತನ್ನ ಮುದ್ರೆಯನ್ನು ಒತ್ತಿದ ಜಾಗಕ್ಕೆ ಇನ್ನು ಮುಂದೆ ತಿರಂಗಾ ಪಾಯಿಂಟ್‌ ಎಂದು ಹೆಸರು.

ಯಾವ ಜಾಗದಲ್ಲಿ ನಾವು ಸೋತಿದ್ದೇವೆಯೋ ಅಲ್ಲಿಂದಲೇ ನಮ್ಮ ಗೆಲುವಿನ ಆರಂಭವಾಗಬೇಕು ಎನ್ನುವ ಉದ್ದೇಶದಿಂದ ಈ ಹೆಸರು.

Krishna Bhat

ಇಡೀ ವಿಶ್ವದ ಆಧಾರ ನಾರೀಶಕ್ತಿ, ಸೃಷ್ಟಿಯಲ್ಲಿ ಅವರ ಪಾತ್ರವೇ ದೊಡ್ಡದು: ಚಂದ್ರಯಾನದಲ್ಲಿ ನಾರಿ ಶಕ್ತಿಯನ್ನು ಹೊಗಳಿದ ನರೇಂದ್ರ ಮೋದಿ

Krishna Bhat

ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರನ್ನು ಇಳಿಸಿದೆ. ಅಲ್ಲಿ ಕತ್ತಲು ಅನ್ನುತ್ತಾರೆ. ಭಾರತ ಕತ್ತಲಿನಲ್ಲಿ ಹೊಸ ಬೆಳಕನ್ನುಹುಡುಕಿದೆ ಎಂದರು ಮೋದಿ

Krishna Bhat

ಯಾವಾಗ ನಿಮ್ಮ ದರ್ಶನ ಪಡೆಯುತ್ತೇನೋ ಎಂದು ಕಾತರಿಸುತ್ತಿದ್ದೆ, ನಿಮಗೆ ಸೆಲ್ಯೂಟ್‌ ಹೊಡೆಯಲು ಕಾಯುತ್ತಿದೆ ಎಂದರು ಪ್ರಧಾನಿ ನರೇಂದ್ರ ಮೋದಿ

Exit mobile version