ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.
ಜಾಲಹಳ್ಳಿ ಸರ್ಕಲ್ ದಾಟಿದ ಪ್ರಧಾನಿ ಮೋದಿ, ಸರ್ಕಲ್‌ನಲ್ಲಿ ಇಳಿದು ಕೈಬೀಸಿ ಮುಂದೆ ರೋಡ್ ಶೋ ನಡೆಸಿದ ಮೋದಿ
ಯಶವಂತ ಪುರ ದಾಟಿದ ಪ್ರಧಾನಿ ನರೇಂದ್ರ ಮೋದಿ.. ಇನ್ನು ಕೆಲವೇ ನಿಮಿಷಗಳಲ್ಲಿ ಇಸ್ರೋ ಪ್ರವೇಶ
HAL ನಿಂದ ಟ್ರಿನಿಟಿ ವೃತ್ತಕ್ಕೆ ಆಗಮಿಸಿದ ಮೋದಿ
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಟ್ರಿನಿಟಿ ವೃತ್ತದಿಂದ ಮುಂದಕ್ಕೆ ಸಾಗಿದ ಪಿಎಂ
ನರೇಂದ್ರ ಮೋದಿ ಸಂಚಾರಕ್ಕೆ ಎಲ್ಲೂ ತೊಂದರೆಯಾಗದಂತೆ ಎಚ್ಚರ ವಹಿಸಿದ ಪೊಲೀಸರು
ಟ್ರಿನಿಟಿ ವೃತ್ತದಿಂದ ಇಸ್ರೋ ಕಚೇರಿಯ ಕಡೆ ಪ್ರಯಾಣ ಬೆಳೆಸಿದ ನರೇಂದ್ರ ಮೋದಿ.
ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೆ ಇಸ್ರೋ ಕಚೇರಿಯ ಕಡೆ ಹೊರಟ ಮೋದಿ
ಎಚ್‌ಎಎಲ್‌ನಲ್ಲಿ ನಿರ್ಮಿಸಿದ್ದ ಪುಟ್ಟ ವೇದಿಕೆಯಿಂದ ಕೆಳಗಿಳಿದು ಪೀಣ್ಯದಲ್ಲಿರುವ ಇಸ್ರೊ ಕಚೇರಿ ಕಡೆ ಹೊರಟ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಸ್ವಾಗತಕ್ಕೆ ಸಿದ್ದರಾಮಯ್ಯ ಯಾಕೆ ಬಂದಿಲ್ಲ?
ರಾಜ್ಯ ಸರ್ಕಾರದ ರಾಜಕೀಯ ಪ್ರತಿನಿಧಿಗಳ ಅಹ್ವಾನ ಬೇಡ ಎಂದು ಪಿಎಂ ಕಚೇರಿಯಿಂದ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನ ಮಾತ್ರ ಕಳುಹಿಸಿ ಕೊಟ್ಟ ರಾಜ್ಯ ಸರ್ಕಾರ
ಪಿಎಂ ಅಹ್ವಾನ ಮಾಡಲು ಹೋಗುವಂತೆ ಪರಮೇಶ್ವರ್ ಗೆ ಸೂಚಿಸಿದ್ದರು ಸಿಎಂ ಸಿದ್ದರಾಮಯ್ಯ, ಆದ್ರೆ ಕೊನೆಯ ಕ್ಷಣದಲ್ಲಿ ಪಿಎಂ ಕಚೇರಿಯಿಂದ ಮಾಹಿತಿ . ರಾಜ್ಯಪಾಲರು ಮತ್ತು ಸಿಎಂ ಸಹ ಸ್ವಾಗತ ಕೋರುವ ಅವಶ್ಯಕತೆ ಇಲ್ಲ.
ಕೇವಲ ಸರ್ಕಾರಿ ಅಧಿಕಾರಿಗಳಿಂದ ಮಾತ್ರ ಸ್ವಾಗತ ಕೋರುವಂತೆ ಸಂದೇಶ ರವಾನೆ ಆಗಿದೆ.
ಹೀಗಾಗಿ ಸ್ವಾಗತ ಕೋರಲು ತೆರಳದ ರಾಜ್ಯ ಸರ್ಕಾರದ ಸಚಿವರು