ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.
ಜೈ ವಿಜ್ಞಾನ್ ಜೈ ಅನುಸಂಧಾನ್ ಘೋಷಣೆ ಕೂಗಿಸಿದ ಮೋದಿ
ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಇಸ್ರೊ ಕಚೇರಿಗೆ ಹೊರಡುವ ಮುನ್ನ ಎಚ್ಎಎಲ್ ಹೊರಗೆ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು ಮೋದಿ. ಆಗ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ವಿಸ್ತರಿಸಿ ಜೈ ವಿಜ್ಞಾನ್ ಜೈ ಅನುಸಂಧಾನ್ ಎಂದರು
ಎಚ್‌ಎಎಲ್‌ನಿಂದ ಹೊರಬಂದು ಜನರತ್ತ ಕೈಬೀಸಿದ ಮೋದಿ
ಮೋದಿ ಸ್ವಾಗತಕ್ಕೆ ರಾಜಕಾರಣಿಗಳಿಲ್ಲ, ಅಧಿಕಾರಿಗಳು ಮಾತ್ರ
ಪ್ರಧಾನಿ ಮೋದಿ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದಾಗ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸ್ವಾಗತಿಸಿದರು. ಬಿಜೆಪಿ ನಾಯಕರಾಗಲಿ, ಮುಖ್ಯಮಂತ್ರಿಗಳಾಗಲೀ ಬಂದಿರಲಿಲ್ಲ