ಬೆಂಗಳೂರು: ಚಂದ್ರಯಾನ 3ರ (Chandrayaan 3) ಮಹಾಯಶಸ್ಸಿನ ಸಂಭ್ರಮವನ್ನು ಇಸ್ರೋದ ವಿಜ್ಞಾನಿಗಳ (ISRO Scientists) ಜತೆ ಸಂಭ್ರಮಿಸಲು ಮತ್ತು ಅವರನ್ನು ಗೌರವಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಿಜೆಪಿಯ ನಾಯಕರನ್ನು ಹತ್ತಿರವೂ ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು (Congress-BJP Fight) ಕಾಲೆಳೆದುಕೊಂಡರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santhosh) ಅವರು ಸ್ವಲ್ಪ ವಿವೇಚನಾತ್ಮಕ ಉತ್ತರ ನೀಡಿದ್ದಾರೆ.
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಪೀಣ್ಯವರೆಗೆ ಕಾರ್ಯಪ್ರವೃತ್ತರಾದ ಟ್ರಾಫಿಕ್ ಪೊಲೀಸರು
ಪ್ರಮುಖ ಜಂಕ್ಷನ್ ಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯಾಗಿದೆ. ಹೆಚ್ಎಎಲ್, ದೊಮ್ಮಲೂರು, ಟ್ರಿನಿಟಿ ಜಂಕ್ಷನ್, ಮಣಿಪಾಲ್ ಸೆಂಟರ್, ಮಿನ್ಕ್ಸ್ ಸ್ಕ್ವೇರ್, ರಾಜಭವನ, ಚಾಲುಕ್ಯ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್, ಯಶವಂತಪುರ, ಗೊರಗುಂಟೆಪಾಳ್ಯ ಜಂಕ್ಷನ್, ಪೀಣ್ಯ, ಜಾಲಹಳ್ಳಿ ಜಂಕ್ಷನ್ ನಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ
ಹಾಗೂ ಭಾರಿ ವಾಹನಗಳನ್ನ ನಗರದ ಹೊರ ಭಾಗದಲ್ಲೆ ತಡೆಯುತ್ತಿರುವ ಪೊಲೀಸರು
ಭಾರಿ ಸರಕು ಸಾಗಣೆ ವಾಹನಗಳು ನಗರ ಪ್ರವೇಶಕ್ಕೆ ನಿಷೇಧ: ಕೆ ಆರ್ ಪುರ, ಯಲಹಂಕ, ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ ಬಳಿಯೇ ದೊಡ್ಡ ದೊಡ್ಡ ಸರಕು ಸಾಗಣೆ ವಾಹನಗಳಿಗೆ ತಡೆ
ಕೇವಲ, ಬಸ್, ಕಾರು, ಮಿನಿ ಗೂಡ್ಸ್ ವಾಹನಗಳಿಗಷ್ಟೆ ಸಿಟಿಗೆ ಎಂಟ್ರಿ
ಬೆಳಗ್ಗೆ 11 ಗಂಟೆಯವರೆಗೆ ಭಾರಿ ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧ
ರಸ್ತೆಯುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನ. ಎಲ್ಲರ ಕೈಯಲ್ಲಿ ತ್ರಿವರ್ಣ ಧ್ವಜ
ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ
ಗ್ರೀಸ್ನ ಅಥೆನ್ಸ್ನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಮೋದಿ
ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ವಿಶೇಷ ವಿಮಾನ
6.30 ಕ್ಕೆ ಹೆಚ್ ಎ ಎಲ್ನಿಂದ ಇಸ್ರೋಗೆ ಹೊರಡಲಿರುವ ಪ್ರಧಾನಿ ಮೋದಿ
ರಸ್ತೆ ಮಾರ್ಗವಾಗಿ ಮೋದಿ ಪ್ರಯಾಣ
HAL ಏರ್ಪೋರ್ಟ್ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ