ಬೆಂಗಳೂರು: ಕೊಬಾಲ್ಟ್ ಫೋರಂ ಆಫ್ ಆರ್ಟ್ & ಮ್ಯೂಸಿಕ್ ಸಂಸ್ಥೆಯು ತನ್ನ 15ನೇ ವರ್ಷದ ಪ್ರಯುಕ್ತ ಸ್ವರಯಾತ್ರಾ ಹೆಸರಲ್ಲಿ ಸರಣಿ ಹಿಂದುಸ್ತಾನಿ ಸಂಗೀತ ಮತ್ತು ಕಲೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮ (Music Events) ಹಮ್ಮಿಕೊಂಡಿದೆ.
ಸೆಪ್ಟೆಂಬರ್ 11ರ ಭಾನುವಾರ ಸಂಜೆ 5ಕ್ಕೆ ರಾಜರಾಜೇಶ್ವರಿ ನಗರದ ಕೊಬಾಲ್ಟ್ ಗ್ಯಾಲರಿಯಲ್ಲಿ ಈ ಸಂಗೀತ ಸಂಜೆ ನಡೆಯಲಿದೆ. ಕುಮಾರಿ ಹಿರಣ್ಮಯಿ ಎಸ್ ಹಾಡಲಿದ್ದು, ಇವರಿಗೆ ಶ್ರೀದತ್ತಾ ಎಂ.ಜಿ ತಬಲಾ ಸಾಥ್ ನೀಡಲಿದ್ದಾರೆ. ಹಾರ್ಮೋನಿಯಂನಲ್ಲಿ ಗೌರವ ಗಡಿಯಾರ್ ಸಹಕರಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಬಿಬಿಎಂಪಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಿ.ಎಚ್.ರಾಮಚಂದ್ರ ಹಾಗೂ ಹಣಕಾಸು ಸಚಿವಾಲಯದ ಮಾಜಿ ಡೆಪ್ಯೂಟಿ ಕಾರ್ಯದರ್ಶಿ ಎಂ ಎಸ್ ಶಿವರಾಮ್ ಉದ್ಘಾಟಿಸಲಿದ್ದಾರೆ. ಕೊಬಾಲ್ಟ್ ಸಂಸ್ಥೆಯ ಅಧ್ಯಕ್ಷ ಗಣಪತಿ ಎಸ್ ಹೆಗಡೆ ಉಪಸ್ಥಿತರಿರಲಿದ್ದಾರೆ.