ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಸಲ್ಲಿಸಿದ್ದ ಅರ್ಜಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಜಾಗೊಂಡಿದ್ದು, (Lokayukta Raid) ಪ್ರಕರಣದ 3ನೇ ಆರೋಪಿ ಸುರೇಂದ್ರಗೆ ಜಾಮೀನು ಸಿಕ್ಕಿದೆ.
40 ಲಕ್ಷ ಲಂಚ ಪಡೆಯುವಾಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ನಂತರ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಪುತ್ರ ಪ್ರಶಾಂತ್ ಮಾಡಾಳ್ ಸೇರಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪ್ರಶಾಂತ್ ಮಾಡಾಳ್ರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | BJP Karnataka: ಮೀಸಲಾತಿ, ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಜನಮನಕ್ಕೆ ತಲುಪಿಸಿ: ಕಾರ್ಯಕರ್ತರಿಗೆ ಎನ್.ರವಿಕುಮಾರ್ ಮನವಿ
ಪ್ರಶಾಂತ್ ಮಾಡಾಳ್ ಜಾಮೀನು ಅರ್ಜಿ ವಜಾ ಬಳಿಕ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಜಯಂತ್ ಕುಮಾರ್ ಅವರು, ತೀರ್ಪು ಕಾಯ್ದಿರಿಸಿ ಏಪ್ರಿಲ್ 15ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಮತದಾರರಿಗೆ ಸೀರೆ ಹಂಚಿದ ಮುನಿರತ್ನ ಬೆಂಬಲಿಗರು; ಸಚಿವರ ವಿರುದ್ಧ 3ನೇ ಎಫ್ಐಆರ್ ದಾಖಲು
ಬೆಂಗಳೂರು: ಜನರಿಗೆ ಸೀರೆ ಹಂಚಿದ ಆರೋಪದಡಿ ಸಚಿವ ಮುನಿರತ್ನ (Munirathna) ವಿರುದ್ಧ ಮತ್ತೊಂದು ಎಫ್ಐಆರ್ ನಗರದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಚುನಾವಣಾ ಆಯೋಗದ ಅಧಿಕಾರಿ ಮನೋಜ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ (Karnataka Election 2023) ದಾಖಲಿಸಿಕೊಳ್ಳಲಾಗಿದೆ.
ರಾಜರಾಜೇಶ್ವರಿನಗರ ವಾರ್ಡ್ನ ಬಂಗಾರಪ್ಪನಗರದಲ್ಲಿ ಸಚಿವ ಮುನಿರತ್ನ ಬೆಂಬಲಿಗರು ಮತದಾರರಿಗೆ ಸೀರೆ ಹಂಚುತ್ತಿರುವ ಕುರಿತು ಚರಣ್ ಹಾಗೂ ಚೇತನ್ ಎಂಬುವವರು ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಟೀಂ ದಾಳಿ ಮಾಡಿತ್ತು. ದಾಳಿ ನಡೆಸುತ್ತಿದ್ದಂತೆ ಸೀರೆ ಹಂಚುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರು ಪರಾರಿಯಾಗಿದ್ದರು.
ಇದನ್ನೂ ಓದಿ | Dalit Chief Minister: ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಡಿ.ಕೆ. ಶಿವಕುಮಾರ್: ದಲಿತ ಸಿಎಂ ಹೇಳಿಕೆ ಕುರಿತು ಬಿಜೆಪಿ ಟೀಕೆ
ಸದ್ಯ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ವಿ.ಸಿ ಚಂದ್ರು A2 ಹಾಗೂ ಸಚಿವ ಮುನಿರತ್ನ A3 ಆರೋಪಿಗಳಾಗಿದ್ದಾರೆ. ಸಚಿವ ಮುನಿರತ್ನ ವಿರುದ್ಧ ದಾಖಲಾದ ಮೂರನೇ ಎಫ್ಐಆರ್ ಇದಾಗಿದೆ. ಮತದಾರರ ಮನವೊಲಿಸಲು ಸೀರೆಗಳ ವಿತರಣೆ ಮೊರೆ ಹೋಗಿರುವ ಅವರು, ಈ ಕೆಲಸವನ್ನು ಪಕ್ಷದ ಕಾರ್ಯಕರ್ತರಿಗೆ ವಹಿಸಿದ್ದಾರೆ. ಈಗಾಗಲೇ ಹಲವಾರು ದಾಳಿ ನಡೆಸಿ ಎಲ್ಲ ಸೀರೆಗಳನ್ನು ರಾಜರಾಜೇಶ್ವರಿನಗರ ಪೋಲಿಸ್ ಠಾಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಕಳೆದ ಮಾರ್ಚ್ 31ರಂದು ಸಚಿವ ಮುನಿರತ್ನ ಸುದ್ದಿವಾಹಿನಿಯೊಂದರಲ್ಲಿ ಕ್ರೈಸ್ತ ಸಮುದಾಯವನ್ನು ಹೊಡೆದು ಓಡಿಸಿ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಪ್ರಚೋದಕಾರಿ ಹೇಳಿಕೆ ನೀಡಿದ ಆರೋಪದಡಿ ಬೆಂಗಳೂರಿನ ಆರ್ಆರ್ನಗರ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ಸೀರೆ ಹಂಚಿಕೆ ವಿಷಯಕ್ಕೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.