Site icon Vistara News

KL Rahul : ಉತ್ತಮ ಪ್ರದರ್ಶನ ನೀಡದೇ ಹೋದರೆ ಟೀಕೆಗಳನ್ನು ಎದುರಿಸಲೇಬೇಕು ಎಂದ ಸೌರವ್​ ಗಂಗೂಲಿ

Sourav Ganguly said that if he does not perform well, he will have to face criticism

ಕೋಲ್ಕೊತಾ: ಭಾರತ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟರ್​ ಕೆ. ಎಲ್​ ರಾಹುಲ್ (KL Rahul)​ ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಕಳೆದ 10 ಟೆಸ್ಟ್​ಗಳಲ್ಲಿ ಅವರು ಗರಿಷ್ಠ 25 ರನ್​ ಬಾರಿಸಿಲ್ಲ. ಹೀಗಾಗಿ ಭಾರತ ತಂಡದಿಂದ ಅವರನ್ನು ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಹಿರಿಯ ಕ್ರಿಕೆಟಿಗರೂ ಅವರ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಕೂಡ ಅದೇ ಸಾಲಿಗೆ ಸೇರಿಕೊಂಡಿದ್ದು, ರಾಹುಲ್​ ವಿರುದ್ಧ ಟೀಕೆ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ಭಾರತ ತಂಡದ ಪರ ಸ್ಕೋರ್​ ಮಾಡಿಲ್ಲ ಎಂದರೆ ಟೀಕೆಗಳನ್ನು ಎದುರಿಸಲೇಬೇಕು. ಇದಕ್ಕೆ ಕೆ. ಎಲ್​ ರಾಹುಲ್ ಕೂಡ ಹೊರತಲ್ಲ. ಈ ಹಿಂದೆಯೂ ಸಾಕಷ್ಟು ಆಟಗಾರರು ಉತ್ತಮ ಪ್ರದರ್ಶನದ ನೀಡದ ಹಿನ್ನೆಲೆಯಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ ಎಂಬುದು ಸೌರವ್​ ಗಂಗೂಲಕ ಪಿಟಿಐಗೆ ಸಂದರ್ಶನ ನೀಡುತ್ತಾ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಟೀಮ್​ ಮ್ಯಾನೇಜ್ಮೆಂಟ್​ ಒಬ್ಬ ಆಟಗಾರ ಅತ್ಯಗತ್ಯ ಎಂದು ಅನಿಸಿದರೆ ಅವರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಯಾಕಂದರೆ ದಿನದಂತ್ಯಕ್ಕೆ ಆ ಆಟಗಾರ ಉತ್ತಮ ಪ್ರದರ್ಶನ ನೀಡುವುದೇ ಪ್ರಮುಖವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ರಾಜಕೀಯಕ್ಕೆ ಕಾಲಿಡ್ತಾರಾ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ?

ರಾಹುಲ್​ ಈ ಹಿಂದೆ ಹಲವಾರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರಬಹುದು. ಆದರೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಅವರಿಂದ ರನ್​ ಹರಿದುಬರಲೇಬೇಕು. ಭಾರತ ತಂಡದಲ್ಲಿ ರನ್​ ಗಳಿಕೆಗೆ ಒಂದು ಮಾನದಂಡ ಇರುತ್ತದೆ. ಅದನ್ನು ಪೂರೈಸಲೇಬೇಕು ಎಂಬುದಾಗಿ ಗಂಗೂಲಿ ಹೇಳಿದ್ದಾರೆ.

Exit mobile version