ಮೆಲ್ಬೋರ್ನ್ : ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ ಪಂದ್ಯದ ವಿಜಯದ ಖುಷಿಯ ಭಾರತೀಯ ಅಭಿಮಾನಿಗಳಿಗೆ ಇನ್ನೂ ಇಳಿದಿಲ್ಲ. ಅಂತೆಯೇ ಪಂದ್ಯದ ಪ್ರತಿ ಕ್ಷಣವೂ ಅಭಿಮಾನಿಗಳ ಮನದಲ್ಲಿ ಹಾಗೆಯೇ ಉಳಿದಿದೆ. ಆರ್. ಅಶ್ವಿನ್ ಅವರು ಇನಿಂಗ್ಸ್‌ನ ಕೊನೇ ಎಸೆತದಲ್ಲಿ ಗೆಲುವಿನ ಹೊಡೆತ ಹೊಡೆಯುವ ಮೂಲಕ ಭಾರತದ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದ್ದರು. ಏತನ್ಮಧ್ಯೆ, ಈ ಗೆಲುವಿನ ಬಳಿಕ ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಜೋರಾಗಿ ಸಂಭ್ರಮಿಸಿದ್ದು ಕಂಡು ಬಂತು.
ಕೊನೇ ಓವರ್‌ನಲ್ಲಿ ಭಾರತ ತಂಡಕ್ಕೆ ೧೬ ರನ್‌ಗಳು ಬೇಕಾಗಿದ್ದವು. ವಿರಾಟ್ ಕೊಹ್ಲಿ ಸತತ ಪ್ರಯತ್ನ ಮಾಡಿ ಅಷ್ಟು ರನ್‌ಗಳನ್ನು ಪೇರಿಸಿದರು. ಈ ಗೆಲುವು ಪಡೆದ ತಕ್ಷಣ ರಾಹುಲ್ ದ್ರಾವಿಡ್ ಅವರು ಡಗ್‌ಔಟ್‌ನಲ್ಲೇ ಜೋರಾಗಿ ಸಂಭ್ರಮಿಸಿದರು. ಅವರ ಸಂಭ್ರಮದ ಪರಿಯನ್ನು ನೋಡಿದ ನೆಟ್ಟಿಗರು, ಅಬ್ಬಾ ಏನು ಪವರ್ ಎಂದು ಕೊಂಡಾಡಿದ್ದಾರೆ.
ಟೀಮ್ ಇಂಡಿಯಾದ ಗೆಲವಿನ ಸಂಭ್ರಮ ಡ್ರೆಸಿಂಗ್ ರೂಮ್‌ನಲ್ಲಿಯೂ ಮುಂದುವರಿದಿತ್ತು. ರಾಹುಲ್ ದ್ರಾವಿಡ್ ಅವರು ವಿರಾಟ್ ಕೊಹ್ಲಿಯನ್ನು ಬಾಚಿ ತಬ್ಬಿಕೊಂಡಿದ್ದರು. ಅದರ ವಿಡಿಯೊ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 113 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ 160 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 31 ರನ್ಗಳಿಗೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 113 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದನ್ನೂ ಓದಿ |