ಬನ್ನೇರುಘಟ್ಟ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯೊಂದು ಮೃತಪಟ್ಟ ಘಟನೆ ಶುಕ್ರವಾ ನಡೆದಿದೆ. ಸಾವಿಗೀಡಾದ ಹುಲಿಯನ್ನು ಕಿರಣ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಜೈವಿಕ ಉದ್ಯಾನವದಲ್ಲಿ ಮೃತಪಟ್ಟ ಹುಲಿ ಕಿರಣ (Tiger Kirana), ಕ್ಯಾನ್ಸರ್ ಹಾಗೂ ರಕ್ತದ ಪ್ರೋಟೋಜೋವಾ ಸೋಂಕಿನಿಂದ ಬಳಲುತ್ತಿತ್ತು. ಈ ಹಿನ್ನಲೆಯಲ್ಲಿ ಹುಲಿಯನ್ನು ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತಾದರೂ ಚಿಕಿತ್ಸೆ ಫಲಿಸಿದೇ ಹುಲಿ ಕಿರಣ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ಈ ಹುಲಿಗೆ ಮೂರು ವರ್ಷ ವಯಸ್ಸಾಗಿತ್ತು. ಕಳೆದ ಮೂರು ತಿಂಗಳಿಂದಲೂ ಹುಲಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು.
ಹುಲಿ ಕಿರಣ ಸಾವಿನೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈಗ ಹುಲಿಗಳ ಸಂಖ್ಯೆ 15ಕ್ಕೆ ಕುಸಿತವಾದಂತಾಗಿದೆ. ಈ ಹಿಂದೆಯೋ ರೀತಿಯ ಸೋಂಕಿಗೆ ಹುಲಿ ಬಲಿಯಾದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಬನ್ನೇರುಘಟ್ಟ ಜೈವಿಕ ಉದ್ಯಾನವು ಬೆಂಗಳೂರು ನಗರ ಜಿಲ್ಲೆ ಆನೆಕಲ್ ತಾಲೂಕಿನಲ್ಲಿದ್ದು, ಸಾಕಷ್ಟು ಪ್ರವಾಸಿಗರ ಈ ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಹುಲಿಗಳು ಇಲ್ಲಿನ ಆಕರ್ಷಕ ಕೇಂದ್ರವಾಗಿವೆ.
ಕೆಲವು ದಿನ ಹಿಂದೆ ಬಿಳಿ ಹುಲಿ, ಸಿಂಹ ಸಾವು
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಬಿಳಿ ಹುಲಿ ಹಾಗೂ ಹೃದಯಸಂಬಂಧಿ ರೋಗದಿಂದ ಅನಾರೋಗ್ಯಕ್ಕೀಡಾಗಿದ್ದ ಸಿಂಹಣಿಯೊಂದು ಕೆಲವು ದಿನಗಳ ಹಿಂದೆ ಮೃತಪಟ್ಟಿತು. ಸಾವಿಗೀಡಾದ ಬಿಳಿ ಹುಲಿಗೆ ವನ್ಯಾ ಎಂದು ನಾಮಕಾರಣ ಮಾಡಲಾಗಿತ್ತು. ಇದೇ ಉದ್ಯಾನವನದಲ್ಲಿದ್ದ ಸೂರ್ಯ ಹಾಗೂ ಸುಭದ್ರ ಹುಲಿ ಜೋಡಿಗೆ ವನ್ಯಾ ಜನಿಸಿತ್ತು. ಮತ್ತೊಂದೆಡೆ, ಸಿಂಹಣಿ ಸನಾ 2010ರಲ್ಲಿ ಜನಿಸಿತ್ತು. ಜೂನ್ 12ರಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ಸಿಂಹಣಿ ಕೊನೆಗೆ ಮೃತಪಟ್ಟಿತ್ತು. ಬನ್ನರೇಘಟ್ಟ ನ್ಯಾಷನಲ್ ಪಾರ್ಕ್, ಬೆಂಗಳೂರಿಂದ 22 ಕಿಮೀ ದೂರದಲ್ಲಿದ್ದು, ಸುಮಾರು 25,000 ಎಕರೆಯಲ್ಲಿ ಹರಡಿಕೊಂಡಿದೆ. ಇಲ್ಲಿ ಸಫಾರಿ ಹೆಚ್ಚು ಜನಪ್ರಿಯವಾಗಿದೆ. ಪ್ರವಾಸಿಗರು ಸಫಾರಿ ನಡೆಸಲು ಇಷ್ಟಪಡುತ್ತಾರೆ.
ಇದನ್ನೂ ಓದಿ | ಲಕ್ಷಾಂತರ ರೂಪಾಯಿ ಮೌಲ್ಯದ 8 ಹುಲಿ ಉಗುರು ವಶ; ಸೆನ್ (CEN) ಪೊಲೀಸರ ಭರ್ಜರಿ ಕಾರ್ಯಾಚರಣೆ