ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಕೇವಲ ಎರಡೂವರೆ ಗಂಟೆಯಲ್ಲಿತಲುಪುವ ದಿನಗಳು ಶೀಘ್ರವೇ ನಮ್ಮದಾಗಲಿವೆ. ಭಾರತೀಯ ರೈಲ್ವೆಯು ಬೆಂಗಳೂರು ಹಾಗೂ ಹೈದರಾಬಾದ್ ಮಧ್ಯೆ ಸೆಮಿ ಹೈಸ್ಪೀಡ್ (Highspeed Railway) ಟ್ರ್ಯಾಕ್ ನಿರ್ಮಿಸಲು ಯೋಜನೆ ರೂಪಿಸುತ್ತಿದ್ದು, ಟ್ರ್ಯಾಕ್ ನಿರ್ಮಾಣವಾದರೆ ಎರಡೂವರೆ ಗಂಟೆಗಳಲ್ಲಿ ಹೈದರಾಬಾದ್ ತಲುಪಬಹುದಾಗಿದೆ.
ಬೆಂಗಳೂರು ಹಾಗೂ ಹೈದರಾಬಾದ್ ಐಟಿ ನಗರಗಳಾಗಿದ್ದು, ಕ್ಷಿಪ್ರಗತಿಯ ಸಂಪರ್ಕ ಸಾಧನೆಗೆ ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ. ಸೆಮಿ ಹೈಸ್ಪೀಡ್ ಟ್ರ್ಯಾಕ್ ನಿರ್ಮಾಣವಾದರೆ ರೈಲುಗಳು ಗಂಟೆಗೆ ೨೦೦ ಕಿ.ಮೀ. ವೇಗದಲ್ಲಿ ಚಲಿಸಲಿದ್ದು, ಇದರಿಂದ ಪ್ರಯಾಣಿಕರಿಗೆ ಎರಡೂವರೆ ಗಂಟೆ ಉಳಿಯಲಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಿಂದ ಹೈದರಾಬಾದ್‌ನ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ೫೦೩ ಕಿ.ಮೀ. ದೂರವಿದ್ದು, ಇಲ್ಲಿಯವರೆಗೆ ಸೆಮಿ ಹೈಸ್ಪೀಡ್ ಟ್ರ್ಯಾಕ್ ಹಾಕಲಾಗುತ್ತದೆ. ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ ಅಡಿಯಲ್ಲಿ ೩೦ ಸಾವಿರ ಕೋಟಿ ರೂ. ವ್ಯಯಿಸಿ ಟ್ರ್ಯಾಕ್ ಹಾಕಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ | ಬುಲೆಟ್ ಟ್ರೇನ್ ಯೋಜನೆ ಎಂಡಿ ಸತೀಶ್ ಅಗ್ನಿಹೋತ್ರಿ ವಜಾ