Site icon Vistara News

IND vs ZIM ODI | ಓಪನಿಂಗ್‌ ಬ್ಯಾಟ್ ಮಾಡಲು ಯಾಕೆ ಹೋದ್ರಿ? ಕೆ. ಎಲ್‌ ರಾಹುಲ್‌ಗೆ ನೆಟ್ಟಿಗರ ತರಾಟೆ

IND vs ZIM ODI

ಹರಾರೆ : ಜಿಂಬಾಬ್ವೆ ಪ್ರವಾಸದಲ್ಲಿರುವ (IND vs ZIM ODI) ಭಾರತ ತಂಡದ ಹಂಗಾಮಿ ನಾಯಕ ಕೆ. ಎಲ್‌ ರಾಹುಲ್‌ ಎರಡನೇ ಪಂದ್ಯದಲ್ಲಿ ಕೇವಲ ಒಂದು ರನ್‌ಗಳಿಗೆ ಔಟಾಗುವ ಮೂಲಕ ಕ್ರಿಕೆಟ್‌ ಪ್ರೇಮಿಗಳ ಕೋಪಕ್ಕೆ ಈಡಾಗಿದ್ದಾರೆ. ನೀವ್ಯಾಕೆ ಆರಂಭಿಕರಾಗಿ ಬ್ಯಾಟ್‌ ಮಾಡಲು ಹೋದ್ರಿ ಎಂದು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸಿದ್ದಾರೆ.

ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ ೧೬೧ ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತಕ್ಕೆ ಕೆ. ಎಲ್‌ ರಾಹುಲ್‌ ಒಂದು ರನ್‌ಗಳಿಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಗಿತ್ತು. ಐಪಿಎಲ್‌ ಮುಕ್ತಾಯದ ಬಳಿಕ ಗಾಯದ ಸಮಸ್ಯೆಗೆ ಒಳಗಾಗಿದ್ದ ಅವರು ಆರು ತಿಂಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟ್‌ ಮಾಡಲು ಬಂದಿದ್ದ ರಾಹುಲ್‌ ಐದು ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್‌ ಬಾರಿಸಿ ಔಟಾಗಿದ್ದರು. ವಿಕ್ಟರ್‌ ಅವರ ನೇರ ಎಸೆತ ರಾಹುಲ್‌ ಅವರ ಪ್ಯಾಡ್‌ಗೆ ಬಡಿದು ಅವರು ಎಲ್‌ಬಿಡಬ್ಲ್ಯು ಔಟ್‌ ಆಗಿದ್ದರು. ಈ ಮೂಲಕ ದೀರ್ಘ ಕಾಲದ ಳಿಕ ಆಡಲು ಇಳಿದಿದ್ದ ರಾಹುಲ್‌ ದುರ್ಬಲ ತಂಡದ ವಿರುದ್ಧ ಭರ್ಜರಿ ರನ್ ಬಾರಿಸಬಹುದು ಎಂಬ ಅಭಿಮಾನಿಗಳ ನಿರಾಸೆ ಹುಸಿಯಾಯಿತು.

ನೆಟ್ಟಿಗರ ಕೋಪ

ರಾಹುಲ್‌ ಔಟಾಗುತ್ತಿದ್ದಂತೆ ನೆಟ್ಟಿಗರ ಕೋಪ ತಲೆಗೇರಿತ್ತು. ಮೊದಲ ಪಂದ್ಯದಲ್ಲಿ ಶುಬ್ಮನ್‌ ಗಿಲ್‌ (೮೨*) ಹಾಗೂ ಶಿಖರ್‌ ಧವನ್‌ (೮೧*) ಔಟಾಗದೆ ಗುರಿ ಮುಟ್ಟಿದ್ದಾರೆ. ಈ ಪಂದ್ಯದಲ್ಲೂ ಅವರನ್ನೇ ಕಳುಹಿಸಿದ್ದರೆ ಒಳ್ಳೆಯದಿತ್ತು. ಸುಮ್ಮನೆ ಔಟಾಗಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದರು. ಇನ್ನೂ ಕೆಲವರು ದುರ್ಬಲ ಬೌಲಿಂಗ್‌ಗೆ ಎಲ್‌ಬಿಡಬ್ಲ್ಯು ಆಗಿರುವುದು ಎಷ್ಟು ಸರಿ ಎಂದು ಕೇಳಿದರು. ಇನ್ನಲವರು ರಾಹುಲ್‌ಗೆ ಅನಗತ್ಯ ಪ್ರಚಾರ ನೀಡಲಾಗುತ್ತಿದೆ. ಅವರ ಆಟ ಅಷ್ಟಕ್ಕಷ್ಟೇ ಎಂದು ಬರೆದುಕೊಂಡಿದ್ದಾರೆ.

Exit mobile version