Site icon Vistara News

Yoga day 2022 | ಜಗದಗಲ ಕಂಡುಬಂದ ಯೋಗ ದಿನದ ಝಲಕ್‌

yoga day 2022

ಇಂದು (ಜೂನ್‌ 21 ) ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ದಿನ ವಿಶ್ವದ ವಿವಿಧೆಡೆಯಲ್ಲಿ ಲಕ್ಷಾಂತರ ಜನತೆ ಉತ್ಸಾಹ, ಸಂಭ್ರಮದಿಂದ ಕಾರ್ಯಕ್ರಮಗಳನ್ನು ಸಂಘಟಿಸಿ ಯೋಗಾಭ್ಯಾಸ ನಡೆಸಿದ್ದಾರೆ. ೮ನೇ ಅಂತಾರಾಷ್ಟ್ರೀಯ ಯೊಗ ದಿನದ ಪ್ರಯುಕ್ತ ಜಗತ್ತಿನ ಹಲವೆಡೆಗಳಲ್ಲಿ ಕಂಡುಬಂದ ಯೋಗಾಭ್ಯಾಸದ ಕೆಲ ಝಲಕ್‌ ಇಲ್ಲಿದೆ.

ಇದನ್ನೂ ಓದಿ| Yoga Day 2022 | ಮೈಸೂರಿಗೆ ಯೋಗ ವಿವಿ ಘೋಷಣೆ; ಹುಸಿಯಾದ ನಿರೀಕ್ಷೆ

1/10. ಭಾರತೀಯ ನೌಕಾಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಯುದ್ಧನೌಕೆಯಲ್ಲಿ ಯೋಗ ದಿನಾಚರಣೆ

2/10. ಯುದ್ಧ ನೌಕೆಯೊಂದರಲ್ಲಿ ಭಾರತೀಯ ನೌಕಾಪಡೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಯೋಗಾಭ್ಯಾಸ ನಡೆಸಿದ ಪರಿ

3/10. ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಮಾಡುವ ಮೂಲಕ ಯೋಗದಿವನ್ನು ಆಚರಿಸಿದರು.

4/10. ಅಮೇರಿಕಾದ ವಾಷಿಂಗ್ಟನ್‌ ಮಾಲ್‌ ಒಂದರ ಮುಂದೆ ವಿವಿಧ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಲಲನೆಯರ ಯೋಗಭಂಗಿ

5/10. ಔರಂಗಾಬಾದ್‌ನಲ್ಲಿ ವಿದ್ಯಾರ್ಥಿಗಳಿಂದ ಯೋಗ ದಿನಾಚರಣೆ

6/10. ಹೈದರಾಬಾದ್‌ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್,
ಕೇಂದ್ರ ಸಚಿವರಾದ ಸರ್ಬಾನಂದ ಸೋನೋವಾಲ್, ಜಿ. ಕಿಶನ್ ರೆಡ್ಡಿ.

7/10. ಗೋವಾ ಬೀಚ್‌ನಲ್ಲಿ ಯೋಗಾಭ್ಯಾಸ ನಡೆಸಿ ಯೋಗದ ಮಹತ್ವ ಸಾರಿದ ವಿದೇಶಿಗರು

8/10. ಲಖ್ನೋದಲ್ಲಿ ನಡೆದ ಯೋಗಾಭ್ಯಾಸದ ಹಿನ್ನೆಲೆಯಲ್ಲಿ ಹಾರಾಡಿದ ತಿರಂಗಾ

9/10. ಲಡಾಖ್‌ನಲ್ಲಿ ಭೂ ಸೇನಾ ಸಿಬ್ಬಂದಿ ಹಿಮದಲ್ಲಿ ಯೋಗ ದಿನ ಆಚರಿಸಿದರು.

10/10. ಪ್ಯಾರಿಸ್‌ನ ಐಫೆಲ್‌ ಟವರ್ ಮುಂದೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಇದನ್ನೂ ಓದಿ| Yoga Day 2022 | ಸೇನೆಯ ಸೈಲೆಂಟ್‌ ವಾರಿಯರ್ಸ್‌ ಪಡೆಯಿಂದ ಪೂಂಛ್‌ನಲ್ಲಿ ಯೋಗ ದಿನಾಚರಣೆ

Exit mobile version