Site icon Vistara News

ವಿಸ್ತಾರ ಬುಕ್‌ ಟಾಕ್‌ : ಬುಕ್‌ ಶೆಲ್ಫ್‌ ಜೊತೆ ಸೆಲ್ಫಿ, ಫೋಟೊ

Extensive Book Talk: Selfie with Bookshelf, Photo

#image_title

ಬೆಂಗಳೂರು: ವಿಸ್ತಾರ ನ್ಯೂಸ್‌ ಚಾನೆಲ್‌ ಈಗಾಗಲೇ ಪ್ರತಿ ವಾರ ಸಾಹಿತ್ಯಕ್ಕೇ ಮೀಸಲಾದ ʼಬುಕ್‌ ಟಾಕ್‌ʼ ಎಂಬ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಈಗ ಬುಕ್‌ ಶೆಲ್ಫ್‌ ಜೊತೆ ಸೆಲ್ಫಿ ತೆಗೆದುಕೊಂಡ ಅಥವಾ ಬುಕ್‌ ಶೆಲ್ಫ್‌ನ ಫೋಟೊಗಳನ್ನು ವಿಸ್ತಾರ ನ್ಯೂಸ್‌ ಪ್ರಕಟಿಸಲು ನಿರ್ಧರಿಸಿದೆ.

ತನ್ನ ಮನೆಯ ಬುಕ್ ಶೆಲ್ಫ್ ಜತೆ ವಿಶ್ವಂ ಮಹೇಶ್ ಚಿದ್ರೆ, ಬೆಂಗಳೂರು.

ತನ್ನ ಮನೆಯ ಬುಕ್ ಶೆಲ್ಫ್ ಜತೆ ಬಸವೆಣ್ಣಪ್ಪ ಕಂಬಾರ

ಬಾಳೆಹೊನ್ನೂರಿನ ಸಿ ಎಚ್ ಬಾಳನಗೌಡ್ರ ಅವರು ತಮ್ಮ ಮನೆಯ ಬುಕ್ ಶೆಲ್ಫ್ ನೊಂದಿಗೆ.

ʼಬುಕ್‌ ಟಾಕ್‌ʼ ಈಗ ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಟಿವಿ ಚಾನೆಲ್‌ಗಳ ಇತಿಹಾಸದಲ್ಲೇ ಇದು ವಿಭಿನ್ನ ಕಾರ್ಯಕ್ರಮವಾಗಿ ಮೂಡಿ ಬರುತ್ತಿದೆ. ಹಿರಿ-ಕಿರಿಯ ಬರಹಗಾರರನ್ನು ಪ್ರೋತ್ಸಾಹಿಸುವುದು, ಉತ್ತಮ ಕೃತಿಗಳ ಪರಿಚಯ ಮಾಡಿಕೊಡುವುದು, ಹೊಸ ಲೇಖಕರನ್ನು ಪ್ರೋತ್ಸಾಹಿಸುವುದು ಮತ್ತು ಸಾಹಿತ್ಯ ಚಟುವಟಿಕೆಗಳನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪುಸ್ತಕ ಬಿಡುಗಡೆಗೂ ಇದು ವೇದಿಕೆಯಾಗುತ್ತಿದೆ.

ಜನಪ್ರಿಯ ಲೇಖಕರು, ನಟ-ನಟಿಯರು, ಗಣ್ಯ ವ್ಯಕ್ತಿಗಳು, ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ವಾರದ ಟಾಪ್‌ 10 ಪುಸ್ತಕಗಳ ಪಟ್ಟಿಯನ್ನೂ ಈ ಬುಕ್‌ ಟಾಕ್‌ನಲ್ಲಿ ನೀಡಲಾಗುತ್ತಿದೆ.
ಇದೀಗ ಓದುಗರ ಬುಕ್‌ ಶೆಲ್ಫ್‌ ಪ್ರೀತಿಯನ್ನು ಉತ್ತೇಜಿಸಲು ಸೆಲ್ಫಿ ಮತ್ತು ಫೋಟೊಗಳನ್ನು ಪ್ರಕಟಿಸಲಾಗುತ್ತದೆ.
ಸಾಹಿತ್ಯಾಸಕ್ತರು ತಮ್ಮ ಮನೆಯಲ್ಲಿ ದೇವರ ಕೋಣೆಗೆ ನೀಡಿರುವಷ್ಟೇ ಮಹತ್ವವನ್ನು ಬುಕ್‌ ಶೆಲ್ಫ್‌ಗೂ ನೀಡುತ್ತಾರೆ. ಹಲವರ ಮನೆಗಳಲ್ಲಿ ಅತ್ಯಂತ ಆಕರ್ಷಕವಾದ ಬುಕ್‌ ಶೆಲ್ಫ್‌ಗಳಿವೆ. ಇಂಥ ಫೋಟೊಗಳನ್ನು ಹಂಚಿಕೊಂಡರೆ ಇತರ ಸಾಹಿತ್ಯಾಸಕ್ತರಿಗೂ ಸ್ಫೂರ್ತಿ ತುಂಬಿದಂತಾಗುತ್ತದೆ.

ನಿಮ್ಮ ಮನೆಯ ಬುಕ್‌ ಶೆಲ್ಫ್‌ ಜೊತೆಗೆ ನೀವು ತೆಗೆದ ಸೆಲ್ಫಿ ಅಥವಾ ಫೋಟೊಗಳನ್ನು ಈ ಕೆಳಗಿನ ವಾಟ್ಸ್‌ಆ್ಯಪ್‌ ಅಥವಾ ಇಮೇಲ್‌ಗೆ ಕಳುಹಿಸಿ.
ವಾಟ್ಸ್‌ ಆಪ್‌ ಸಂಖ್ಯೆ: 9481024181
contact@vistaranews.com

Exit mobile version