ಕೂದಲು ಸಿಕ್ಕಾಪಟ್ಟೆ ಅಂಟಾಗುತ್ತಿದ್ದರೆ ಡ್ರೈ ಶಾಂಪೂನಿಂದ ತೊಳೆಯಿರಿ. ಆದರೆ ಡ್ರೈ ಶಾಂಪೂವನ್ನೇ ಸದಾ ಬಳಸಬೇಡಿ

ಕೂದಲಿಗೆ ಹೊಂದುವಂಥ ಕಂಡೀಶನರ್‌ ಹಾಕುವುದು ಸಹ ಸರಳವಾದ ಪರಿಹಾರ

ಕೂದಲ ಬುಡವನ್ನು ಉಗುರಿನಿಂದ ಉಜ್ಜಬೇಡಿ. ಇದರಿಂದ ತೈಲ ಸ್ರವಿಸುವುದು ಮತ್ತೂ ಹೆಚ್ಚುತ್ತದೆ

ಕೂದಲನ್ನು ಚೆನ್ನಾಗಿ ಬಾಚಿ ಮತ್ತು ಬಾಚಣಿಕೆಯನ್ನು ಆಗಾಗ ಸ್ವಚ್ಛಗೊಳಿಸಿ. ಇದರಿಂದ ಕೂದಲ ಬುಡಕ್ಕೆ ಸೋಂಕಾಗುವುದನ್ನು ತಪ್ಪಿಸಬಹುದು

ಬಾಚಣಿಕೆಯ ಬ್ರಿಸಲ್‌ಗಳ ತುದಿ ಚೂಪಾಗಿದ್ದು, ತಲೆಯನ್ನು ಗೀರುವಂತೆ ಇರಬಾರದು. ಬದಲಿಗೆ ಮಸಾಜ್‌ ಮಾಡುವಂತಿರಬೇಕು

ತೀರಾ ಜಿಡ್ಡಿನಿಂದ ಕೂಡಿದ ಎಣ್ಣೆಯನ್ನು ಬಳಸಬೇಡಿ. ಲಘುವಾದ ಹೇರ್‌ಆಯಿಲ್‌ ಬಳಸಿ

ಟೊಮೇಟೊ ಹೇರ್‌ಪ್ಯಾಕ್‌ ಜಿಡ್ಡಿನ ಕೂದಲಿಗೆ ಉತ್ತಮ ಪರಿಹಾರ. ಜೊತೆಗೆ ಕೊಂಚ ಮುಲ್ತಾನಿ ಮಿಟ್ಟಿಯನ್ನೂ ಸೇರಿಸಬಹುದು

ಟೊಮೇಟೊದಲ್ಲಿರುವ ಆಮ್ಲೀಯ ಅಂಶವು ತಲೆಯ ಚರ್ಮದ ಪಿಎಚ್‌ ಸಮತೋಲನಕ್ಕೆ ನೆರವಾಗುತ್ತದೆ