ದಿನಕ್ಕೆ 30 ನಿಮಿಷದ ತ್ವರಿತ ನಡಿಗೆಯು ಕಣ್ಣು ಸೇರಿದಂತೆ ದೇಹದೆಲ್ಲಾ ಭಾಗಗಳಿಗೆ ರಕ್ತ ಸಂಚಾರ ಹೆಚ್ಚಿಸುತ್ತದೆ 

ಸೈಕಲ್‌ ಹೊಡೆಯುವುದರಿಂದ ಕಣ್ಣು ಸಹಿತವಾಗಿ ದೇಹದೆಲ್ಲೆಡೆ ಆಮ್ಲಜನಕದ ಹರಿವನ್ನು ಹೆಚ್ಚಿಸಬಹುದು

ಕಣ್ಣುಗಳನ್ನು ಮೇಲೆ ತಿರುಗಿಸಿ 3 ಸೆಕೆಂಡ್‌ ಅಲ್ಲೇ ನಿಲ್ಲಿಸಿ, ಕೆಳಗೆ ತಿರುಗಿಸಿ 3 ಸೆಕೆಂಡ್‌ ನಿಲ್ಲಿಸಿ. ಹೀಗೆ ಹಲವು ಸಾರಿ ಪುನರಾವರ್ತಿಸಿ 

ಐದು ಬಾರಿ ಪ್ರದಕ್ಷಿಣೆಯಾಗಿ, ಇನ್ನೈದು ಬಾರಿ ಅಪ್ರದಕ್ಷಿಣೆಯಾಗಿ ಕಣ್ಣುಗಳನ್ನು ವೃತ್ತಾಕಾರದಲ್ಲಿ ತಿರುಗಿಸಿ. 

ಸುಮಾರು 20 ಸೆಕೆಂಡುಗಳ ಕಾಲ ನೇತ್ರಗಳನ್ನು ಪಟಪಟನೆ ಮಿಟುಕಿಸಿ. ಇದರಿಂದ ಕಣ್ಣು ಶುದ್ಧವಾಗುತ್ತದೆ  

ಹತ್ತಿರದ ವಸ್ತುವನ್ನು ಕೆಲ ಸಮಯ ದಿಟ್ಟಿಸಿ, ಹಾಗೆಯೇ ದೂರದ ವಸ್ತುವನ್ನೂ ಅಲ್ಪ ಕಾಲ ದಿಟ್ಟಿಸಿ. ಇದರಿಂದ ಕಣ್ಣುಗಳ ಆಯಾಸ ಪರಿಹಾರವಾಗುತ್ತದೆ

ಅಂಗೈಯನ್ನು ಒಂದಕ್ಕೊಂದು ಬಿಸಿಯಾಗುವಷ್ಟು ಉಜ್ಜಿ, ಈ ಬಿಸುಪನ್ನು ಕಣ್ಣುಗಳಿಗೆ ತಾಗಿಸಿ