Edited By: Pragati Bhandari

ಕ್ಯಾಲ್ಶಿಯಂಯುಕ್ತ ಆಹಾರಗಳಾದ ಡೇರಿ ಉತ್ಪನ್ನಗಳು, ಹಸಿರು ತರಕಾರಿಗಳು, ಸೋಯಾದಂಥವು ಮೂಳೆಗಳ ಆರೋಗ್ಯ ಕಾಪಾಡುತ್ತವೆ

ಕೊಬ್ಬುಯುಕ್ತ ಮೀನುಗಳಲ್ಲಿರುವ ವಿಟಮಿನ್‌ ಡಿ, ಒಮೇಗಾ 3 ಕೊಬ್ಬಿನಾಮ್ಲಗಳು ಕ್ಯಾಲ್ಶಿಯಂ ಹೀರಿಕೊಳ್ಳುವುದಕ್ಕೆ ಬೇಕು. ಇವು ಮೂಳೆ ಮುರಿಯದಂತೆಯೂ ತಡೆಯುತ್ತವೆ

ಪಾಲಕ್‌ನಂಥ ಹಸಿರು ಸೊಪ್ಪುಗಳು ದೇಹದಲ್ಲಿ ಉರಿಯೂತ ಶಮನ ಮಾಡಿ ಕೀಲು ನೋವು ಕಡಿಮೆ ಮಾಡುತ್ತವೆ

ಚಿಯಾ, ಅಗಸೆ, ಬಾದಾಮಿಯಂಥ ಬೀಜಗಳಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ ಮತ್ತು ಫಾಸ್ಫರಸ್‌ ಇದ್ದು, ಮೂಳೆಗಳ ಆರೋಗ್ಯಕ್ಕಿವು ಅಗತ್ಯ

ಮೂಳೆಗಳ ಬಲವರ್ಧನೆಗೆ ಅಗತ್ಯವಾದ ಸ್ನಾಯುಗಳು ಬೆಳೆಯುವುದು ಪ್ರೊಟೀನ್‌ನಿಂದ. ಚಿಕನ್‌, ಮೊಟ್ಟೆ, ಕಾಳುಗಳು, ಸೋಯಾ, ಡೇರಿ ಉತ್ಪನ್ನಗಳು ಬೇಕು

ಹಣ್ಣುಗಳಿಂದ ದೊರೆಯುವ ಸಿ ಜೀವಸತ್ವವು ಕೊಲಾಜಿನ್‌ ಉತ್ಪತ್ತಿಗೆ ಅಗತ್ಯ. ಹಣ್ಣುಗಳ ಫ್ಲೆವನಾಯ್ಡ್‌ಗಳು ಉರಿಯೂತ ತಗ್ಗಿಸುತ್ತವೆ  

ಇಡೀ ಧಾನ್ಯಗಳಲ್ಲಿ ಇರುವಂಥ ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ಗಳು ದೇಹದಲ್ಲಿನ ಉರಿಯೂತ ಕಡಿಮೆ ಮಾಡುತ್ತವೆ

ಶುಂಠಿ, ಬೆಳ್ಳುಳ್ಳಿ, ಅರಿಶಿನದಂಥ ಮೂಲಿಕೆಗಳಲ್ಲಿ ಪ್ರಬಲ ಉತ್ಕರ್ಷಣ ನಿರೋಧಕಗಳಿದ್ದು, ಉರಿಯೂತವನ್ನು ನಿರ್ಮೂಲ ಮಾಡುತ್ತವೆ